Kannada NewsKarnataka NewsLatest

ಬೆಳಗಾವಿ ಪಾಲಿಕೆ ಮಾದರಿ ಮಾಡಲು ಅಭಯ ಪಾಟೀಲ ಸೂತ್ರ

ಯಾವುದೇ ಸ್ಟಡಿ ಟೂರ್ ಇದ್ದರೂ ಸ್ವಂತ ಖರ್ಚಿನಲ್ಲೇ ಮಾಡಲಾಗುವುದು

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಮಹಾನಗರ ಪಾಲಿಕೆಯನ್ನು ರಾಜ್ಯದಲ್ಲೇ ಮಾದರಿ ಪಾಲಿಕೆಯನ್ನಾಗಿಸಲು ಯೋಜನೆ ಹಾಕಿಕೊಂಡಿರುವ ಶಾಸಕ ಅಭಯ ಪಾಟೀಲ, ಈ ಸಂಬಂಧ ಕೆಲವು ಸೂತ್ರಗಳನ್ನು ಮಂಡಿಸಿದ್ದಾರೆ.

Home add -Advt

ಭಾನುವಾರ ಮಿಲೇನಿಯಂ ಗಾರ್ಡನ್ ನಲ್ಲಿ ಬೆಳಗಾವಿಯ ವಿವಿಧ ಸಂಘಟನೆಗಳೊಂದಿಗೆ ನೂತನ ಪಾಲಿಕೆ ಸದಸ್ಯರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಗರದ ಸಂಘ ಸಂಸ್ಥೆಗಳು ಹಲವಾರ ಸಮಸ್ಯೆಗಳನ್ನು ಗಮನಕ್ಕೆ ತಂದಿವೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕ್ರಿಯಾ ಯೋಜನೆಯೊಂದನ್ನು ರೂಪಿಸಲಾಗುವುದು ಎಂದೂ ಅವರು ತಿಳಿಸಿದರು.

ಬೆಳಗಾವಿಗೆ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಸಾಧ್ಯವಾದಷ್ಟು ಅನುದಾನ ತರಲಾಗುವುದು. ಆಯ್ಕೆಯಾಗಿರುವ ಸದಸ್ಯರಿಗೆ ಉತ್ತಮ ಅವಕಾಶ ಸಿಕ್ಕಿದೆ. ಎಲ್ಲರೂ ಸೇರಿಕೊಂಡು, ಕೇವಲ ಬಿಜೆಪಿ ಸದಸ್ಯರಷ್ಟೇ ಅಲ್ಲದೇ ಎಲ್ಲರನ್ನೂ ಕೂಡಿಕೊಂಡು ಕೆಲಸ ಮಾಡಬೇಕಾಗಿದೆ ಎಂದು ಅಭಯ ಪಾಟೀಲ ಹೇಳಿದರು.

ಬೆಳಗಾವಿ ಮಹಾನಗರ ಪಾಲಿಕೆ ನೂತನ ಸದಸ್ಯರಿಗೆ ಅವರ ಕರ್ತವ್ಯ, ಕೆಲಸಗಳ ಕುರಿತು 2 ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ದೇಶದ ಮಾದರಿ ಪಾಲಿಕೆಗಳಾದ ಇಂದೋರ್, ನಾಗಪುರ ಹಾಗೂ ಸೂರತ್ ಗಳಿಗೆ ಪಾಲಿಕೆ ಸದಸ್ಯರನ್ನು ಕರೆದೊಯ್ಯಲಾಗುವುದು. ಆದರೆ ಇದಕ್ಕೆ ಪಾಲಿಕೆಯಿಂದ ಖರ್ಚು ಭರಿಸುವುದಿಲ್ಲ. ಯಾವುದೇ ಸ್ಟಡಿ ಟೂರ್ ಇದ್ದರೂ ಸ್ವಂತ ಖರ್ಚಿನಲ್ಲೇ ಮಾಡಲಾಗುವುದು ಎಂದು ಅಭಯ ಪಾಟೀಲ ಘೋಷಿಸಿದರು.

ಸಂಸದೆ ಮಂಗಲಾ ಅಂಗಡಿ, ಶಾಸಕ ಅನಿಲ ಬೆನಕೆ ಉಪಸ್ಥಿತರಿದ್ದರು.

ಇದಕ್ಕೂ ಮೊದಲು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಬೆಳಗಾವಿಗೆ ಆಗಬೇಕಾದ ಕೆಲಸಗಳ ಕುರಿತು ಗಮನಕ್ಕೆ ತಂದರು. ಪಾಲಿಕೆ ಸದಸ್ಯರ ಪರವಾಗಿ ವಾಣಿ ವಿಲಾಸ ಜೋಶಿ ಮತ್ತು ಮಂಗೇಶ ಪವಾರ್ ಮಾತನಾಡಿದರು.

ಬೆಳಗಾವಿ ಫೋರಂ ಆಫ್ ಅಸೋಸಿಯೇಶನ್ (FOAB) ಸಂವಾದ ಕಾರ್ಯಕ್ರಮಕ್ಕೆ ಸಹಯೋಗ ಒದಗಿಸಿತ್ತು.

ನೂತನ ನಗರಸೇವಕರೊಂದಿಗೆ ಭಾನುವಾರ ಸಂಘ ಸಂಸ್ಥೆಗಳ ಸಂವಾದ

Related Articles

Back to top button