ಸಿಎಂ ಜಗನ್ ನಿರ್ಧಾರ ಖಂಡನೀಯ ಎಂದ ಪವನ್ ಕಲ್ಯಾಣ್

ಪ್ರಗತಿವಾಹಿನಿ ಸುದ್ದಿ; ಅಮರಾವತಿ: ಆಂಧ್ರ ವಿಧಾನ ಪರಿಷತ್‌ ರದ್ದುಗೊಳಿಸುವ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ವೈ.ಎಸ್​​ ಜಗನ್​​ ಮೋಹನ್​​ ರೆಡ್ಡಿ ನೇತೃತ್ವದ ಸರ್ಕಾರದ ವಿರುದ್ಧ ಜನಸೇನಾ ಮುಖ್ಯಸ್ಥ ನಟ ಪವನ್​​ ಕಲ್ಯಾಣ್​​ ಕಿಡಿಕಾರಿದ್ಧಾರೆ.

ಸುದ್ದಿಗಾರರೊಂದಿಗೆ ಮಾತಾಡಿದ ನಟ ಪವನ್​​ ಕಲ್ಯಾಣ್​​, ಜಗನ್​​ ಮೋಹನ್​​ ರೆಡ್ಡಿ ಸರ್ಕಾರ ತೀರ್ಮಾನ ನ್ಯಾಯಸಮ್ಮತ ಅಲ್ಲ. ಇದು ಸಂವಿಧಾನಕ್ಕೆ ವಿರುದ್ಧವಾದ ನಿರ್ಧಾರ ಎಂಬುದು ಜನಸೇನೆ ಅಭಿಪ್ರಾಯ ಎಂದರು.

ವೈ.ಎಸ್​​ ರಾಜಶೇಖರ್​​ ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯ ವಿಧಾನ ಪರಿಷತ್​​​ ಶುರು ಮಾಡಲಾಯ್ತು. ಅಂದಿನ ವಿಧಾನ ಪರಿಷತ್​​ ಅನ್ನು ಇಂದು ಸಿಎಂ ವೈ.ಎಸ್ ಜಗನ್​​ ಮೋಹನ್​ ರೆಡ್ಡಿ ರದ್ದುಗೊಳಿಸಿರುವುದು ಖಂಡನೀಯ. ಇದರ ವಿರುದ್ಧ ಜನಸೇನೆ ಹೋರಾಟ ಮಾಡಲಿದೆ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಲುವಾಗಿ ವಿಧಾನ ಪರಿಷತ್​​ ಬೇಕಿದೆ ಎಂದು​ ತಿಳಿಸಿದರು.

ವಿಧಾನ ಪರಿಷತ್​​ ತೆಗೆದು ಹಾಕಲು ಆಂಧ್ರಪ್ರದೇಶ ಸಿಎಂ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಸಚಿವ ಸಂಪುಟ ನಿರ್ಣಯ ತೆಗೆದುಕೊಂಡಿದೆ. ಇದನ್ನು ಈಗಾಗಲೇ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ಆಡಳಿತರೂಢ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷಕ್ಕೆ ಸ್ಪಷ್ಟ ಬಹುಮತ ಇರುವುದರಿಂದ ಸುಲಭವಾಗಿ ಅನುಮೋದನೆ ಸಿಕ್ಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button