*ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಬೆಳಗಾವಿ ABVP ಆಗ್ರಹ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣ ಖಂಡನೀಯವಾದದ್ದು, ಪ್ರಕರಣದ ಬಗ್ಗೆ ಯಾವುದೇ ಒತ್ತಡಕ್ಕೆ ಮಣಿಯದೆ ರಾಜ್ಯಸರ್ಕಾರ ಸೂಕ್ತ ತನಿಖೆ ನಡೆಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ.
ಇದರ ಬೆನ್ನಲ್ಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ಮಹಾನಗರ ವತಿಯಿಂದ ಉಡುಪಿಯ ನೇತ್ರಜೋತಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ 3 ವಿದ್ಯಾರ್ಥಿನಿಯರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಬೆಳಗಾವಿ ಅಪರ ಜಿಲ್ಲಾ ಅಧಿಕಾರಿಗಳ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಲಾಯಿತು.
ಹೋರಾಟದಲ್ಲಿ ಎಬಿವಿಪಿಯ ಪ್ರಿತಮ ಉಪರಿ, ರೋಹಿತ್ ಅಲಕುಂಟೆ, ಕಿರ್ತಿ ರೇವಣಕರ, ದರ್ಶನ ಹೆಗಡೆ, ಅಮೋಲ, ಕಾವೇರಿ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿಯ ನೇತ್ರ ಜ್ಯೋತಿ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿನಿಯರು ಶೌಚಾಲಯವನ್ನು ಬಳಸುವ ವೀಡಿಯೋವನ್ನು ಅನ್ಯಕೋಮಿನ ವಿದ್ಯಾರ್ಥಿನಿಯರಾದ ಶಬನಾಜ್, ಅಲ್ಲಿಯಾ ಮತ್ತು ಅಲಿಮಾತುಲ್ ಶಾಫಿಯಾ ಇವರುಗಳು ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಕಾಲೇಜು ಆಡಳಿತ ಪ್ರಾಥಮಿಕ ಹಂತವಾಗಿ ವಿಷಯವನ್ನು ಪರೀಶಿಲಿಸಿದ ನಂತರ ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿದೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕಾಗಿದ್ದ ಪೋಲಿಸ್ ಇಲಾಖೆ, ಯಾವುದೋ ಒತ್ತಡಕ್ಕೆ ಮಣಿದು ಈ ಘಟನೆ ಬಗ್ಗೆ ಇರುವ ಸತ್ಯಾಸತ್ಯತೆ ಹೊರಬರದಂತೆ ತಡೆದಿದ್ದಾರೆ. ಎಬಿವಿಪಿ ಮತ್ತು ನಾಗರೀಕ ಸಮಾಜದ ತೀವ್ರ ವಿರೋಧ ಹಾಗೂ ವಿದ್ಯಾರ್ಥಿ ಪರಿಷತ್ ಹೋರಾಟಕ್ಕೆ ಕರೆ ನೀಡಿದ ನಂತರ ಪ್ರಕರಣ ದಾಖಲಿಸಿಲಾಗಿದೆ.
ಈ ಘಟನೆಯ ಹಿಂದೆ ಜಿಹಾದಿಗಳ ಕೈವಾಡವಿದ್ದು, ಈ ರೀತಿಯ ವಿಡಿಯೋಗಳನ್ನು ಚಿತ್ರೀಕರಿಸಿ, ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ನಂತಹ ಕೂಪಕ್ಕೆ ತಳ್ಳುವ ಷಡ್ಯಂತ್ರಗಳು ಇರುವ ಬಗ್ಗೆ ಅನುಮಾನವಿದೆ. ಇದರಿಂದ ಪೋಷಕರು ಆತಂಕಪಡುವಂತಾಗಿದೆ. ಈ ಪ್ರಕರಣದ ಆರೋಪಿಗಳನ್ನು ಪೋಲಿಸ್ ಇಲಾಖೆಯು ಸೂಕ್ತ ರೀತಿಯ ತನಿಖೆಗೆ ಒಳಪಡಿಸಬೇಕು. ಸರ್ಕಾರವು ಈ ಪ್ರಕರಣದಲ್ಲಿ ಹಸ್ತ ಕ್ಷೇಪ ಮಾಡದೆ ಸತ್ಯಾಸತ್ಯತೆಯು ಹೊರತರುವ ಕೆಲಸ ಮಾಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕು. ಈ ರೀತಿಯ ಘಟನೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲು ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ