ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪಟ್ಟಣದ ವಿವಿಧೆಡೆ ವಾಣಿಜ್ಯ ಮಳಿಗೆಗಳ ಮೇಲೆ ಶನಿವಾರ ಆಕಸ್ಮಿಕ ದಾಳಿ ನಡೆಸಿದ ಉಪವಿಭಾಗಾಧಿಕಾರಿ ಅಶೋಕ ತೇಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ವರ್ತಕರ ವಿರುದ್ಧ ಶಿಸ್ತುಕ್ರಮ ಜರುಗಿಸಿದರು.
ದಾಳಿ ಸಂದರ್ಭದಲ್ಲಿ ಪಟ್ಟಣದ ಬಸವೇಶ್ವರ ವೃತ್ತದ
ಬಳಿಯ ಉಪಹಾರ ಗೃಹ ಮತ್ತು ಬಾರ್ ಆಂಡ್ ರೆಸ್ಟೋರಂಟ್ಗಳಲ್ಲಿ ಪಾರ್ಸಲ್ ಸೇವೆ
ನೀಡುವುದನ್ನು ಬಿಟ್ಟು ಗ್ರಾಹಕರನ್ನು ಒಳಗೆ ಕರೆದುಕೊಂಡಿದ್ದ ವರ್ತಕರ ವಿರುದ್ಧ ಮತ್ತು
ಸರ್ಕಾರ ಸೂಚಿಸಿದ ಅವಧಿಯ ಬಳಿಕವೂ ದಿನಸಿ ಪದಾರ್ಥಗಳನ್ನು ಮಾರುತ್ತಿದ್ದ ಸ್ಥಳೀಯ
ಮಾರುತಿ ನಗರದ ವಾಣಿಜ್ಯ ಮಳಿಗೆಯ ಮಾಲೀಕರ ವಿರುದ್ಧ ಅವರು ದೂರು ದಾಖಲಿಸಿಕೊಂಡರು.
ದಾಳಿಯಲ್ಲಿ ಪಿ.ಎಸ್.ಐ ಬಸಗೌಡ ಪಾಟೀಲ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವಿವೇಕ
ಬನ್ನೆ ಮತ್ತಿತರರು ಇದ್ದರು.
ಆಸ್ತಿಗಾಗಿ ಬಡಿದು ಕೊಂದರು; ಕೊಂದಿದ್ಯಾರನ್ನು ಗೊತ್ತೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ