ಪ್ರಗತಿವಾಹಿನಿ ಸುದ್ದಿ, ಅಹಮದಾಬಾದ್: ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರನ್ನು ಬಲಿ ತೆಗೆದುಕೊಂಡ ಕಾರು ವಿಪರೀತ ವೇಗದಲ್ಲಿ ಸಾಗುತ್ತಿತ್ತು ಎಂಬ ಅಂಶ ಪೊಲೀಸ್ ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ.
ಅಪಘಾತ ಸಂಭವಿಸಿದಾಗ ಸೈರಸ್ ಮಿಸ್ತ್ರಿ ಅವರು ಸೀಟ್ ಬೆಲ್ಟ್ ಧರಿಸಿರಲಿಲ್ಲ, ಅವರು ಪ್ರಯಾಣಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಅವರು ಮತ್ತು ಅವರ ಸಹ-ಪ್ರಯಾಣಿಕ ಜಹಾಂಗೀರ್ ಪಾಂಡೋಲೆ ಮೃತಪಟ್ಟಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಅಪಘಾತ ಸಂಭವಿಸಿದ ವೇಳೆ ಸೈರಸ್ ಮಿಸ್ತ್ರಿ ಅವರ ಜೊತೆಯಲ್ಲಿ ಪಾಂಡೋಲ್ ಕುಟುಂಬದ ಮೂವರು ಕುಟುಂಬ ಸ್ನೇಹಿತರು ಇದ್ದರು. ಕಳೆದ ವಾರ ಡೇರಿಯಸ್ ಮತ್ತು ಜಹಾಂಗೀರ್ ಪಾಂಡೋಲೆ ಅವರ ತಂದೆ ದಿನಶಾ ಪಾಂಡೋಲೆ ಅವರ ಮರಣದ ನಂತರ ಅವರು ಉದ್ವಾಡದ ಪಾರ್ಸಿ ಯಾತ್ರಾ ಸ್ಥಳದಿಂದ ಅವರು ಹಿಂದಿರುಗುತ್ತಿದ್ದರು. ಅಲ್ಲಿ ಅವರು ಪ್ರಾರ್ಥನೆ ಸಲ್ಲಿಸಲು ಹೋಗಿದ್ದರು ಎನ್ನಲಾಗಿದೆ.
ಮುಂಬೈನ ಉನ್ನತ ಸ್ತ್ರೀರೋಗ ತಜ್ಞೆ ಡಾ. ಅನಾಹಿತಾ ಪಾಂಡೋಲ್ ಅವರು ಕಾರನ್ನು ಓಡಿಸುತ್ತಿದ್ದರೆ, ಅವರ ಪತಿ ಡೇರಿಯಸ್ ಪಾಂಡೋಲ್, ಜೆಎಂ ಫೈನಾನ್ಷಿಯಲ್ ಪ್ರೈವೇಟ್ ಇಕ್ವಿಟಿಯ ಸಿಇಒ ಅವರು ಮುಂದೆ ಕುಳಿತಿದ್ದರು. ಡೇರಿಯಸ್ ಅವರ ಸಹೋದರ, ಕೆಪಿಎಂಜಿಯಲ್ಲಿ ಉನ್ನತ ಕಾರ್ಯನಿರ್ವಾಹಕರಾಗಿದ್ದ ಜಹಾಂಗೀರ್ ಅವರು ಹಿಂದೆ ಕುಳಿತಿದ್ದರು. ಅವರು ಸಹ ಅಪಘಾತದಲ್ಲಿ ಮೃತಪಟ್ಟರು.
ಅನಾಹಿತಾ ಪಾಂಡೋಲ್ ಅವರು ಕಾರನ್ನು ಎಷ್ಟು ವೇಗವಾಗಿ ಓಡಿಸುತ್ತಿದ್ದರೆಂದರೆ ಈ ಕಾರು ಕೇವಲ 9 ನಿಮಿಷಗಳಲ್ಲಿ 20 ಕಿ.ಮೀ. ಕ್ರಮಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಮಹಮದಾಬಾದ್ ನಿಂದ ಮುಂಬೈಗೆ ಆಗಮಿಸುತ್ತಿದ್ದ ಕಾರು ಗುಜರಾತ್ ನ ಉದ್ವಾಡಾ ಗ್ರಾಮದ ಬಳಿ ಭಾನುವಾರ ಅಪಘಾತಕ್ಕೀಡಾಗಿ ದುರಂತ ಸಂಭವಿಸಿತ್ತು.
ಫ್ಲಾಪಿ ಡಿಸ್ಕ್, ಸಿಡಿಗಳ ವಿರುದ್ಧ ‘ಸಮರ’ವನ್ನೇ ಸಾರಿದ ಜಪಾನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ