*ಬೆಳಗಾವಿಯಲ್ಲಿ ಮಿತಿ ಮೀರುತ್ತಿರುವ ಅಪಘಾತ; ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸರು ಅಪಘಾತ ತಡೆಗೆ ಜಾಗೃತಿ ಕ್ರಮಗಳನ್ನು ಕೈಗೊಂಡರೂ ಅಪಘಾತಗಳು ನಿಲ್ಲುತ್ತಿಲ್ಲ. ಕೇವಲ ಎರಡೇ ದಿನದಲ್ಲಿ ಏಳು ಜನ ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಸಂಭವಿಸಿರುವ ರಸ್ತೆ ಅಪಘಾತದಲ್ಲಿ ಏಳು ಜನ ವಾಹನ ಸವಾರರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ರಾಮದುರ್ಗ ತಾಲೂಕಿನಲ್ಲಿ ಇಬ್ಬರ ಸಾವು
ರಾಮದುರ್ಗ ಕಡೆಯಿಂದ ತಿಮ್ಮಾಪೂರ ಕಡೆಗೆ ಬರುವ ವೇಳೆ ಮಂಗ ಅಡ್ಡ ಬಂದ ಪರಿಣಾಮ ಬೈಕ ಅಪಘಾತ ಸಂಭವಿಸಿದ್ದು ತಿಮ್ಮಾಪುರ ಗ್ರಾಮದ ಮರಿಯಪ್ಪ ಮಾದರ (48) ಮೃತಪಟ್ಟಿದ್ದಾರೆ.
ಹಾಗೆಯೇ ಇದೇ ದಿನ ಕಟಕೋಳ – ಮನವಳ್ಳಿ ಬಳಿ ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸವದತ್ತಿ ತಾಲೂಕಿನ ಇಂಚಲದ ಶಿವು ಜಕ್ಕಪ್ಪನ್ನವರ (22) ಮೃತಪಟ್ಟಿದ್ದಾನೆ.
ರಾಯಬಾಗ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬನಹಟ್ಟಿ ಮೂಲದ ಆನಂದ ಪೂಜಾರಿ(23) ಮೃತಪಟ್ಟಿದ್ದಾರೆ.
ನಿಪ್ಪಾಣಿ ತಾಲೂಕಿನ ಕಸನಾಳ – ಬೋರಗಾಂವ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಾಳಾಸೋ ಮುದಾಳೆ (30) ಮಂಗಳವಾರ ಮೃತಪಟ್ಟಿದ್ದಾನೆ.
ಕಟಕೋಳ – ಯರಗಟ್ಟಿ ರಸ್ತೆಯಲ್ಲಿ ಕಾರು ಅಪಘಾತದಲ್ಲಿ ರಾಮದುರ್ಗ ಪಟ್ಟಣದ ನಿವಾಸಿ ವಿಶ್ವನಾಥ ರಾಮದುರ್ಗ (24) ಮೃತಪಟ್ಟಿದ್ದಾರೆ.
ರಾಮನಗರ ಕಡೆಯಿಂದ ಜೋಯಿಡಾ ಕಡೆಗೆ ತೆರಳುವ ವೇಳೆ ಬೈಕ್ ಅಪಘಾತ ಸಂಭವಿಸಿದ್ದು ಈ ಸಂದರ್ಭದಲ್ಲಿ ದಿಗಂಬರ ಗಾವರೆ (27)ಮೃತಪಟ್ಟಿದ್ದಾನೆ.
ರಸ್ತೆ ಪಕ್ಕ ನಿಂತಿದ್ದ ಟ್ಯಾಂಕರ್ ಗೆ ಬೈಕ್ ಡಿಕ್ಕಿಯಾಗಿ ಎಂ.ಕೆ ಹುಬ್ಬಳ್ಳಿ ಮೂಲದ ಶಂಕರಪ್ಪ ಬಡಿಗೇರ ಮೃತಪಟ್ಟಿದ್ದಾರೆ. ಕಳೆದ ಎರಡು ದಿನಗಳಲ್ಲಿ ಏಳು ಸಾವು ದಾಖಲಾಗಿದ್ದು ಇದರಲ್ಲಿ ಬೆಳಗಾವಿ ನಗರ ಹೊರತುಪಡಿಸಿದೆ.
ಹೀಗೆ ವಿವಿಧ ಅಪಘಾತ ಪ್ರಕರಣದಲ್ಲಿ ಜಿಲ್ಲೆಯಲ್ಲಿ ಏಳು ಜನ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.



