Belagavi NewsBelgaum NewsKannada NewsKarnataka News

*ರಥೋತ್ಸವದ ವೇಳೆ ಅವಘಡ: ರಥದ ಬೆಳ್ಳಿ ನವಿಲು ಬಿದ್ದು ಬಾಲಕ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಥೋತ್ಸವದ ವೇಳೆ ರಥದ ಮೇಲಿನ ಬೆಳ್ಳಿಯ ನವಿಲು ಬಿದ್ದು 13 ವರ್ಷ ವಯಸ್ಸಿನ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ನಡೆದಿದೆ.‌

ಶಿವಾನಂದ ರಾಜಕುಮಾರ ಸಾವಳಗಿ (13) ಮೃತ ಬಾಲಕ, ಪ್ರತಿವರ್ಷದಂತೆ ಶ್ರಾವಣ ಪ್ರಯುಕ್ತ ಗ್ರಾಮದ ಸಂಗಮೇಶ್ವರ ರಥೋತ್ಸವ ಆಯೋಜನೆ ಮಾಡಲಾಗಿತ್ತು. 30 ಅಡಿ ಎತ್ತರದ ರಥದ ಮೇಲೆ 5 ಕೆಜಿ ತೂಕದ ಬೆಳ್ಳಿ ನವಿಲು ಪ್ರತಿಷ್ಠಾಪನೆ ಇದೆ. ರಥ ಸಂಚರಿಸಬೇಕಾದ ರಸ್ತೆ ಮಳೆಯಿಂದ ಸಂಪೂರ್ಣ ಹಾಳಾಗಿದೆ. ಹಾಳಾದ ರಸ್ತೆಯಲ್ಲೇ ದೇವಸ್ಥಾನದಿಂದ ತುಸು ದೂರ ಗ್ರಾಮಸ್ಥರು ಎಳೆದಿದ್ದಾರೆ.‌ ರಥ ಅತ್ತಿತ್ತ ಹೊರಳಾಡಿ ಕಳಸದ ಮೇಲಿನ ಬೆಳ್ಳಿ ನವಿಲು ಕಿತ್ತು ಬಾಲಕನ ಮೇಲೆ ಬಿದ್ದು ಅವಘಡ ಸಂಭವಿಸಿದೆ. 

ತಲೆಗೆ ತೀವ್ರ ಪೆಟ್ಟಾಗಿ ಬಾಲಕ ಶಿವಾನಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.‌ ಅವಘಡದಿಂದ ರಥೋತ್ಸವ ಅರ್ಧಕ್ಕೆ ನಿಂತಿದೆ.  ಸವದತ್ತಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

https://pragativahini.com/6-lakh-rs-compensation-minister-lakshmi-hebbalkar-issued-the-order

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button