Kannada NewsKarnataka NewsLatest

*ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ತಂದೆ-ಮಗನ ಮೇಲೆ ಹರಿದು ಹೋದ ಲಾರಿ: ಇಬ್ಬರೂ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಮೊಬೈಲ್ ನಲ್ಲಿ ಮಾತನಾಡುತ್ತ ರಸ್ತೆ ಬದಿ ನಿಂತಿದ್ದ ತಂದೆ ಹಗೂ ಮಗನಿಗೆ ಡಿಕ್ಕಿ ಹೊಡೆದ ಲಾರಿ, ಅವರ ಮೇಲೆಯೇ ಹರಿದು ಹೋಗಿರುವ ಘೋರ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರಿನ ಹೊರವಲಯದಲ್ಲಿ ಈ ಘಟನೆ ನಡೆದಿದೆ. ತಂದೆ ಹಾಗೂ ಮಗ ರಸ್ತೆ ಬದಿ ಮೊಬೈಲ್ ನಲ್ಲಿ ಮಾತನಾಡುತ್ತ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ ಅವರ ಮೆಲೆ ಹರಿದು ಹೋಗಿದೆ. ಅಪಘಾತದ ರಭಸಕ್ಕೆ ತಂದೆ-ಮಗನ ದೇಹ ಛಿದ್ರ ಛಿದ್ರವಾಗಿ ಬಿದ್ದಿದೆ.

ತಂದೆ ನಾಗಪ್ಪ ಹಾಗೂ ಮಗ ರಮೇಶ್ (38) ಮೃತರು. ರಾಯಚೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.


Home add -Advt

Related Articles

Back to top button