
ಪ್ರಗತಿವಾಹಿನಿ ಸುದ್ದಿ, ಧಾರವಾಡ – ಧಾರವಾಡ ಬಳಿ ರಸ್ತೆ ಅಪಘಾತದಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ.
ಎರಡು ಕಾರುಗಳ ನಡುವೆ ಢಿಕ್ಕಿ ಸಂಭವಿಸಿದೆ. ಕುಂದಗೋಳ ಶಿವಾನಂದ ಮಠ ಬಸವೇಶ್ವರ ಸ್ವಾಮೀಜಿ ಸೇರಿದಂತೆ 4 ಜನರು ಮೃತಪಟ್ಟಿದ್ದಾರೆ.
ಕುಂದಗೋಳ ನಿವಾಸಿ ಶಂಕರಗೌಡ ಪಾಟೀಲ್, ಎದುರಿನ ಕಾರಿನ, ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ನಿವಾಸಿಗಳಾದ ಮಹಾದೇವ ಕಾಡೇಶಗೋಳ ಮತ್ತು ಮಾರುತಿ ಕುಕನೂರ ಮೃತಪಟ್ಟಿದ್ದಾರೆ.
ಧಾರವಾಡ ಹೊರವಲಯದ ಯರಿಕೊಪ್ಪ ಬಳಿ ರಾಷ್ಟ್ರೀಯ ಹೆದ್ದಾರಿ ನಂ. 4ರಲ್ಲಿ ಈ ಅಪಘಾತ ಸಂಭವಿಸಿದೆ.
ಕುಂದಗೋಳ ಪಟ್ಟಣದ ಶಿವಾನಂದ ಮಠದ ಸ್ವಾಮೀಜಿ ಬೆಳಗ್ಗೆಯಷ್ಟೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ್ದರು. ಗಣರಾಜ್ಯೋತ್ಸವ ಮುಗಿಸಿ ಧಾರವಾಡದಲ್ಲಿ ನಡೆಯುತ್ತಿದ್ದ ಭಕ್ತರೊಬ್ಬರ ಮದುವೆಗೆ ಆಗಮಿಸುತ್ತಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ