Belagavi NewsBelgaum NewsKarnataka News

*ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ:ಟ್ರಾಫಿಕ್ ಜಾಮ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಏಕಾಏಕಿ ಗೂಡ್ಸ್ ಲಾರಿ ಪಲ್ಟಿಯಾಗಿದ್ದು, ಅಪಘಾತ ತಪ್ಪಿಸಲು ಹೋಗಿ ಮತ್ತೊಂದು ಗೂಡ್ಸ್ ವಾಹನ ಅಪಘಾತವಾಗಿರುವ ಘಟನೆ ನಡೆದಿದೆ.

ಬೆಳಗಾವಿ ತಾಲೂಕಿನ ಬಡೇಕೊಳಮಠ ಕ್ರಾಸ್ ಬಳಿ ಈ ಘಟನೆ ಸಂಭವಿಸಿದೆ. ಕ್ಯಾಂಟರ್ ವಾಹನ ಅಪಘಾತ ಹಿನ್ನಲೆ ಚಾಲಕನಿಗೆ ಗಂಭೀರ ಗಾಯವಾಗಿದೆ. ಈ ಅಪಘಾತದಿಂದ ಬೆಳಗಾವಿ- ಹುಬ್ಬಳ್ಳಿ ನಡುವೆ ಕಿಮಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿತ್ತು.

ರಾಷ್ಟ್ರೀಯ ಹೆದ್ದಾರಿ ಬಿಟ್ಟು ಸರ್ವಿಸ್ ರಸ್ತೆ ಅಪಘಾತವಾದ ವಾಹನಗಳು ಹೋಗಬೇಕಿತ್ತು. ಸರ್ವಿಸ್ ರಸ್ತೆ ಬಿಟ್ಟು ಹೆದ್ದಾರಿ ಮೇಲೆ ಎರಡು ವಾಹನಗಳು ಬಂದಿವೆ. ಏಕಾಏಕಿ ಪಲ್ಟಿಯಾದ ವಾಹನ ನೋಡಿ ಮತ್ತೊಂದು ಗೂಡ್ಸ ವಾಹನಕ್ಕೆ ಅಪಘಾತವಾಗಿದೆ. 

ನಾಲ್ಕು ಜೆಸಿಬಿ ಬಳಿ ಬಳಸಿ  ರಾಷ್ಟ್ರೀಯ ಹೆದ್ದಾರಿ ತಂಡ ರಸ್ತೆ ತೆರವು ಮಾಡಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.‌

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button