Latest

ಭೀಕರ ಅಪಘಾತ; ನಿರೂಪಕಿ ಸೇರಿ ಮೂವರ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಜೈಪುರ: ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ನಿರೂಪಕಿ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಚಿತ್ತೋಡಗಢದಲ್ಲಿ ಸಂಭವಿಸಿದೆ.

ಟ್ರಕ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ನಿರೂಪಕಿ ಶಹಜಾದ್, ವಿರೇಂದ್ರ ಹಾಗೂ ಆಶಿಷ್ ಎಂದು ಗುರುತಿಸಲಾಗಿದೆ.

ಶಹಜಾದ್ ಖಾಸಗಿ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿದ್ದು, ವಿರೇಂದ್ರ ಡಿಜೆ ಸೌಂಡಿಂಗ್ ಕೆಲಸದಲ್ಲಿದ್ದರು ಎನ್ನಲಾಗಿದೆ. ಗಂಗಾನಗರದ ಚತುಷ್ಪಥ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button