
ಪ್ರಗತಿವಾಹಿನಿ ಸುದ್ದಿ: ಟಿಟಿ ವಾಹನ ಹಾಗೂ ಬೈಕ್ ನಡಿವೆ ಸಂಭವಿಸಿದ ಭೀಕರ ಅಪಗಹತದಲ್ಲಿ ವೈದುರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮುಸ್ತಾಪುರ್ ಗೇಟ್ ಬಳಿ ನಡೆದಿದೆ.
ಅಪಘಾತದಲ್ಲಿ ಬೈಕ್ ನಲ್ಲಿದ್ದ ವೈದ್ಯ ಮೃತಪಟ್ಟಿದ್ದಾರೆ. ಡಾ.ನೀಲಕಂಠ ಬೋಸ್ಲೆ (50) ಮೃತ ವೈದ್ಯರು. ಬೆಳಿಗ್ಗೆ ಎಂದಿನಂತೆ ತಮ್ಮ ಕ್ಲಿನಿಕ್ ಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಟಿಟಿ ವಾಹನ ಬೈಕ್ ಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ಮೃತ ವೈದ್ಯ ಡಾ.ನೀಲಕಂಠ ಔರಾದ್ ನ ಸಂತಪುರ ನಿವಾಸಿ ಎಂದು ತಿಳಿದುಬಂದಿದೆ.