ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬಿಜೆಪಿ ಎಸ್ ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಮಾಜಿ ಸದಸ್ಯ ವೆಂಕಟೇಶ ಮೌರ್ಯ ವಿರುದ್ಧ ಇಬ್ಬರು ಮಹಿಳೆಯರು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವೆಂಕಟೇಶ ಮೌರ್ಯ ಅವರು ತಮಗೆ ಅಶ್ಲೀಲ ಮೆಸೇಜ್ ಗಳನ್ನು ಕಳಿಸಿದ್ದಾಗಿ ದೂರು ದಾಖಲಿಸಿದ ಬೋವಿ ಸಮಾಜದ ನಾಯಕಿ ತುಳಸಿ ರಮೇಶ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ ದೀಪಾ ಶ್ರೀನಿವಾಸ್ ಆರೋಪಿಸಿದ್ದಾರೆ.
ವೆಂಕಟೇಶ ಮೌರ್ಯ ಅವರೂ ಮಹಿಳೆಯರ ವಿರುದ್ಧ ಪ್ರತಿದೂರು ದಾಖಲಿಸಿ “ಚಿತ್ರದುರ್ಗದ ಸ್ವಾಮೀಜಿಯೊಬ್ಬರ ಬಗ್ಗೆ ಪೋಸ್ಟ್ ಮಾಡಿರುವ ಕಾರಣ ಮಹಿಳೆಯರು ಹಲ್ಲೆಗೆ ಯತ್ನಿಸಿದ್ದು ಸ್ವಾಮೀಜಿ ಕಡೆಯಿಂದ ಹಲ್ಲೆಗೆ ಯತ್ನಿಸಲಾಗಿದೆ” ಎಂದು ದೂರಿದ್ದಾರೆ.
ಠಾಣೆ ಎದುರು ವಾಗ್ಯುದ್ಧ:
ಏತನ್ಮಧ್ಯೆ ಪೊಲೀಸ್ ಠಾಣೆ ಎದುರು ವೆಂಕಟೇಶ ಮೌರ್ಯ ಹಾಗೂ ದೂರುದಾರ ಮಹಿಳೆಯರ ಮಧ್ಯೆ ವಾಗ್ಯುದ್ಧ ನಡೆದಿದೆ.
ಮೌರ್ಯ ಅವರ ವಕೀಲರನ್ನು ತರಾಟೆಗೆ ತೆಗೆದುಕೊಂಡ ಮಹಿಳೆಯರು “ಹೆಣ್ಣು ಮಕ್ಕಳಿಗೆ ಅಶ್ಲೀಲ ಸಂದೇಶ ಕಳಿಸಿದವರಿಗೆ ಬೆಂಬಲಿಸುತ್ತೀರಾ..? ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಹೀಗೇ ಮಾಡಿದರೆ ಸುಮ್ಮನಿರುತ್ತೀರಾ..” ಎಂದೆಲ್ಲ ಪ್ರಶ್ನಿಸಿದ್ದಾರೆ.
ಪೊಲೀಸರು ಮಧ್ಯ ಪ್ರವೇಶಿಸಿ ವಾಗ್ಯುದ್ಧ ಶಮನಗೊಳಿಸಿದ್ದಾರೆ.
ಬೆಳಗಾವಿ ಅಧಿವೇಶನದ ಮೊದಲ ದಿನ 2 ಪ್ರಮುಖ ನಿರೀಕ್ಷೆ
https://pragati.taskdun.com/2-major-expectations-on-the-first-day-of-belgaum-session/
ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಟ್ರ್ಯಾಕಿಂಗ್ ( ಚಾರಣ) ಶಿಬಿರ
https://pragati.taskdun.com/all-india-ncc-trekking-expedition-belgaum-trek-2022/
*ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸ ಘೋಷಣೆ*
https://pragati.taskdun.com/chief-minister-basavaraja-bommai-new-announcement/
*ಅಕ್ರಮ ಮದ್ಯ ಸಾಗಿಸುತ್ತಿದ್ದವರ ಬಂಧನ*
https://pragati.taskdun.com/exsise-offisers-arrestd-one-person-carrying-goa-liquor/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ