*ಶಹಾಪುರ ಪೊಲೀಸ್ ಠಾಣೆಯಲ್ಲಿ ಸರಗಳ್ಳತನ ಪ್ರಕರಣದಲ್ಲಿ ಆರೋಪಿ ಬಂಧನ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ವಿವಿಧ ಠಾಣೆಗಳಲ್ಲಿ ದಾಖಲಾದ ಸರಗಳ್ಳತನ ಪ್ರಕರಣಗಳಿಗೆ ಸಂಬಂದಿಸಿದಂತೆ ಆರೋಪಿಯನ್ನು ಬಂಧಿಸಿದ ಪೊಲೀಸರು ಲಕ್ಷ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ.
ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಗ್, ಉಪ-ಪೊಲೀಸ್ ಆಯುಕ್ತ (ಅ&ಸಂ) ಸ್ನೇಹ ಪಿ ವಿ ಮತ್ತು ಮಾರ್ಕೆಟ್ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸೋಮೇಗೌಡ ಜಿ. ಯು ಮಾರ್ಗದರ್ಶನದಲ್ಲಿ ಶಹಾಪೂರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ರವರ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿ ಜನರ ತಂಡವು ಜುಲೈ 4 ರಂದು ಪ್ರಜ್ವಲ ಜಯಪಾಲ ಖಾನಜಿ ಎಂಬ ಆರೋಪಿಗೆ ಶಹಾಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 32/2024 ಕಲಂ 392 ಐಪಿಸಿ ನೇದ್ದರಲ್ಲಿ ದಸ್ತಗಿರಿ ಮಾಡಲಾಗಿದೆ.
ಈತನಿಂದ ಬೆಳಗಾವಿ ನಗರದ ಶಹಾಪೂರ. ತಿಲಕವಾಡಿ, ಉದ್ಯಮಬಾಗ ಪ್ರದೇಶಗಳಲ್ಲಿ ಸರಗಳ್ಳತನ ಮಾಡಿದ ಬಂಗಾರದ ಆಭರಣಗಳನ್ನು ಮಣಪ್ಪುರಂ ಪೈನಾನ್ಸ ಶಾಖೆಯಲ್ಲಿ ಅಡವಿಟ್ಟಿರುವ 7,50,000 ಬೆಲೆಯ ಒಟ್ಟು 103.430ಗ್ರಾಂ ಬಂಗಾರದ ಆಭರಣಗಳನ್ನು ಹಾಗೂ ಗುನ್ನೆಗೆ ಬಳಸಿದ 25,000 ರೂ ಬೆಲೆಯ ಹಿರೋ ಸ್ಟೆಂಡರ್ ಪ್ಲಸ್ ಮೋಟಾರ ಸೈಕಲ್‌ನ್ನು ಸೇರಿ ಒಟ್ಟು 7,75,000 ಬೆಲೆಯ ಸ್ವತ್ತನ್ನು ಜುಲೈ 10 ರಂದು ಜಪ್ತ ಮಾಡಿ ವಶಕ್ಕೆ ಪಡೆದು, ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇಡಿಸಲಾಗಿದೆ.
ಈ ಪ್ರಕರಣದ ತನಿಖಾ ತಂಡದಲ್ಲಿ ಶಹಾಪೂರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ರವರಾದ ಎಸ್ ಎಸ್ ಸಿಮಾನಿ, ಪಿ.ಎಸ್.ಐ ರವರುಗಳಾದ ಮಣಿಕಂಠ ಪೂಜಾರಿ, ಎಸ್ ಎನ್ ಬಸ್ವಾ, ಎ,ಎಸ್,ಐ ಆರ್ ಆಯ್ ಸನದಿ, ಸಿ.ಎಚ್.ಸಿ ರವರಾದ ಸಂತೋಷ ಪಾಟೀಲ ಸಿಸಿಬಿ ಘಟಕ, ಎಸ್ ಎಮ್ ಗುಡದೈಗೋಳ, ನಾಗರಾಜ ಓಸಪ್ಪಗೋಳ, ಸಿಪಿಸಿ ಗಳಾದ ಸುರೇಶ ಎಮ್ ಕಾಂಬಳೆ, ಆನಂದ ಖೋತ, ಹಣಮಂತ ವಿಭೂತಿ. ಅಮರನಾಥ ದಂಡಿನ, ಗಂಗವ್ವ ಈ ಪಾರ್ವತಿ ಇವರ ಕಾರ್ಯವೈಖರಿಯನ್ನು ಬೆಳಗಾವಿ ಪೊಲೀಸ್ ಆಯುಕ್ತರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ