*ಸ್ಟೇರ್ ವೀಲ್‌ಗಳನ್ನು ಕಳ್ಳತನ ಮಾಡುತ್ತಿದ್ದ ಓರ್ವ ಆರೋಪಿ ಅರೆಸ್ಟ್; ಮತ್ತೋರ್ವ ಪರಾರಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ನೆಹರು ನಗರದಲ್ಲಿರುವ ಸುತಾರಿಯಾ ಆಟೋಮೊಬೈಲ್ ನ ಆವರಣದಲ್ಲಿ ನಿಲ್ಲಿಸಿದ್ದ ಮಹಿಂದ್ರಾ ಬುಲೆರೋ ಪಿಕ್ಅಪ್ ವಾಹನಗಳಿಗೆ ಅಳವಡಿಸಿದ್ದ ಸ್ಟೇರ್ ವೀಲ್‌ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಎ.ಪಿ.ಎಮ್.ಸಿ ಠಾಣೆ ಪೊಲೀಸರು ಆರೋಪಿಯನ್ನು ಶಿವಮೊಗ್ಗದಲ್ಲಿ ಬಂಧಿಸಿದ್ದಾರೆ. ಸಯ್ಯದಹಸೇನ್ ಸಯ್ಯದನೂರ್ ಬಂಧಿತ ಆರೋಪಿ. 60,000/- ರೂ ಮೌಲ್ಯದ 5 ಸ್ಟೇರ್ ವೀಲ್‌ಗಳನ್ನು ಹಾಗೂ ಕಳ್ಳತನ ಮಾಡಲು ಉಪಯೋಗಿಸಿದ ಸುಮಾರು 9,50,000/- ರೂ ಮೌಲ್ಯದ ಬಾಟಾ ಇಂಟ್ರಾ – 30 ಗೋಲ್ಡ್ ವಾಹನ ಹೀಗೆ ಒಟ್ಟು 10,10,000/- ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ಕೈಕೊಂಡಿದ್ದಾರೆ.
ಪರಾರಿಯಾಗಿರುವ ಮತ್ತೋರ್ವ ಆರೋಪಿ ಶಿವಮೊಗ್ಗ ಮೂಲದ ಸೋನು ಸಯ್ಯದ್ ಸಮಿವುಲ್ಲಾ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.
ಕಾರ್ಯಾಚರಣೆಯಲ್ಲಿ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯ ಪಿಎಸ್‌ಐ, ಎಸ್.ಆರ್ ಮುತ್ತತ್ತಿ, ಬಿ ಕೆ ಮಿಟಗಾರ, ಎ.ಎಸ್.ಐ, ಡಿ ಸಿ ಸಾಗರ, ಬಸವರಾಜ ನರಗುಂದ, ಖಾದರಸಾಬ ಖಾನಮ್ಮನವರ, ನಾಗಪ್ಪಾ, ಬೀರಗೊಂಡ, ಗೋವಿಂದಪ್ಪ ಪೂಜಾರ ಹಾಗೂ ಪೊಲೀಸ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ರಮೇಶ ಅಕ್ಕಿ, ಮಹಾದೇವ ಖಶೀದ ಪ್ರಶಂಸನೀಯ ಕೆಲಸ ಮಾಡಿದ್ದು ಪೊಲೀಸ್ ಆಯುಕ್ತರು ಹಾಗೂ ಉಪಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.