Latest

ಅಂಬಾನಿಗೆ ಜೀವಬೆದರಿಕೆಯೊಡ್ಡಿದವ ಮಾನಸಿಕ ರೋಗಿ?

ಪ್ರಗತಿವಾಹಿನಿ ಸುದ್ದಿ, ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಹತ್ಯೆ ಮಾಡುವ ಬೆದರಿಕೆಯೊಡ್ಡಿದ್ದ ಆರೋಪಿ ಮಾನಸಿಕ ರೋಗಿ ಎಂದು ಆತನ ಪರ ವಕೀಲರು ಹೇಳಿದ್ದಾರೆ.

ಬಿಹಾರದ ದರ್ಭಾಂಗದ ನಿರುದ್ಯೋಗಿ ರಾಕೇಶ್ ಕುಮಾರ್ ಮಿಶ್ರಾ (30) ಇತ್ತೀಚೆಗೆ ಮುಖೇಶ್ ಅಂಬಾನಿ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಲ್ಲದೆ ಎಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ್ದ. 

ನಂತರದಲ್ಲಿ ಮುಂಬೈಯ ಡಿಬಿ ಮಾರ್ಗ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ನಿರುದ್ಯೋಗಿಯಾಗಿರುವ ರಾಕೇಶ್ ಕುಮಾರ್ ಮಿಶ್ರಾ ಮಾನಸಿಕವಾಗಿ ನೊಂದಿದ್ದಾನೆ. ದೀರ್ಘಕಾಲದ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾನೆ. ಬೆಲೆ ಏರಿಕೆಯಿಂದ ಆತ ಹತಾಶನಾಗಿದ್ದ. ಕೇಂದ್ರ ಸರಕಾರ ರಿಲಯನ್ಸ್‌ಗೆ ಒಲವು ತೋರುತ್ತಿದೆ ಎಂದು ನಂಬಿದ್ದ. ಹೀಗಾಗಿಯೇ ಆತ ಅಂಬಾನಿ  ಅವರಿಗೆ ಬೆದರಿಕೆ ಕರೆಗಳನ್ನು ಮಾಡಿದ” ಎಂದು ಅವರ ವಕೀಲರು ನಗರದ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

Home add -Advt

ಆಸ್ಕರ್ ಗೆ ಎಂಟ್ರಿ ಪಡೆದ ‘ಛೆಲ್ಲೊ ಶೋ’ ಚಿತ್ರದ ಬಾಲನಟ ರಾಹುಲ್ ಅಕಾಲಿಕ ಸಾವು

Related Articles

Back to top button