ಪ್ರಗತಿವಾಹಿನಿ ಸುದ್ದಿ, ಸೂರತ್: ಈ ಹಿಂದೆ ದೇಶದ ನಾನಾ ಕಡೆ ರಿಕ್ಷಾ ಪುಲ್ಲರ್ ಗಳಾಗಿ ಸ್ವತಃ ಮನುಷ್ಯರೇ ಕೆಲಸ ನಿರ್ವಹಿಸುವಾಗ ಸುಪ್ರೀಂಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ವಿಷಾದಿಸಿತ್ತು. ಆದಾಗ್ಯೂ ವಾಹನ ಖರೀದಿ ಶಕ್ತಿ ಇಲ್ಲದ ಹಲವರು ಇಂದಿಗೂ ಆ ಕೆಲಸ ಮಾಡುತ್ತ ಬಂದಿದ್ದರು.
ಆದರೆ ಇದೀಗ ಸೂರತ್‌ನ ನಾಲ್ಕು ವಿದ್ಯಾರ್ಥಿಗಳ ಗುಂಪು ತಮ್ಮ ಹೊಸ ರೋಬೋಟ್‌ನೊಂದಿಗೆ ತಂತ್ರಜ್ಞಾನ ಉದ್ಯಮದಲ್ಲಿ ಗಮನಾರ್ಹ ಪ್ರಗತಿಯನ್ನು ಮಾಡಿದೆ. ಈ ವಿದ್ಯಾರ್ಥಿಗಳು ಮನುಷ್ಯನಂತೆ ನಡೆಯಬಲ್ಲ ಮತ್ತು ರಿಕ್ಷಾ ಎಳೆಯುವ ರೋಬೋಟ್ ವಿನ್ಯಾಸಗೊಳಿಸಿದ್ದಾರೆ. ಈ ವಿನೂತನ ರೋಬೋಟ್ ನ್ನು ವಿವಿಧ ಉದ್ದೇಶಗಳಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಬಳಸಬಹುದಾದ ಅದರ ಕಾರ್ಯವನ್ನು ವಿಸ್ತರಿಸುವ ಉದ್ದೇಶದಿಂದ ರಚಿಸಲಾಗಿದೆ.
ಈ ರೋಬೋಟ್ ಕೇವಲ 30 ಸಾವಿರ ರೂ. ವೆಚ್ಚದಲ್ಲಿ ತಯಾರಾಗಿದ್ದು ಕೇವಲ 25 ದಿನಗಳನ್ನು ತೆಗೆದುಕೊಂಡಿ ವಿದ್ಯಾರ್ಥಿಗಳ ಈ ಸಾಧನೆ ಸಾಮಾಜಿಕ ಜಾಲತಾಣಗಳಲ್ಲಿ ತೂಫಾನೆಬ್ಬಿಸಿದೆ.
ಮಾನವನ ಕಾಲುಗಳು ಮತ್ತು ಅವು ನಡೆಯುವ ರೀತಿಯನ್ನು ಆಳವಾಗಿ ಅಧ್ಯಯನ ಮಾಡಿದ ನಂತರ ರೋಬೋಟ್ ನ್ನು ವಿನ್ಯಾಸಗೊಳಿಸಲಾಗಿದೆ ಎಂದು ಯೋಜನೆಯ ಹಿಂದಿರುವ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಮೌರ್ಯ ಶಿವಂ ವಿವರಿಸಿದ್ದಾರೆ. “ಇದನ್ನು ರಸ್ತೆಯಲ್ಲಿ ನಡೆಯಲು ಯಶಸ್ವಿ ಪರೀಕ್ಷೆ ನಡೆಸಲಾಗಿದೆ. ಇದು ನಮ್ಮ ಮೂಲಮಾದರಿಯಾಗಿದೆ, ಇದನ್ನು ನಾವು ರಸ್ತೆಯಲ್ಲಿ ಪರೀಕ್ಷಿಸಿದ್ದೇವೆ. ಇನ್ನೂ ಕೆಲ ಹಂತಗಳು ಪೂರ್ಣಗೊಳ್ಳಬೇಕಿವೆ. ಅದರ ಕಾಲು, ಕೈ, ತಲೆ ಮತ್ತು ಮುಖದ ಮೇಲೆ ಕೆಲಸ ಇನ್ನೂ ಉಳಿದಿದೆ. ಸಾಮಾನ್ಯ ಮನುಷ್ಯ ಹೇಗೆ ನಡೆಯುತ್ತಾನೋ ಅದೇ ರೀತಿಯಲ್ಲಿ ನಾವು ಅದನ್ನು ರಚಿಸಲು ಪ್ರಯತ್ನಿಸಿದ್ದೇವೆ” ಎಂದು ಅವರು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ