VTU Add
Beereshwara 36
LaxmiTai 5

*ಹೆಂಡತಿ ಹಾಗೂ ಸೋದರಳಿಯನನ್ನು ಗುಂಡಿಟ್ಟು ಕೊಂದು ತಾನು ಆತ್ಮಹತ್ಯೆಗೆ ಶರಣಾದ ACP*

Anvekar 3

ಪ್ರಗತಿವಾಹಿನಿ ಸುದ್ದಿ; ಪುಣೆ: ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪತ್ನಿ ಹಾಗೂ ಸೋದರಳಿಯನಿಗೆ ಗುಂಡಿಟ್ಟು ಹತ್ಯೆಗೈದು, ತಾನು ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಎಸಿಪಿ ಭರತ್ ಗಾಯಕ್ವಾಡ್, ಪತ್ನಿ ಮೋನಿ ಗಾಯಕ್ವಾಡ್ (44) ಹಾಗೂ ಸೋದರಳಿಯ ದೀಪಕ್ (35)ಅವರನ್ನು ಗುಂಡಿಟ್ಟು ಸಾಯಿಸಿದ್ದು, ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಂದು ಮುಂಜಾನೆ 3:30ರ ಸುಮಾರಿಗೆ ಪುಣೆಯ ತಮ್ಮ ನಿವಾಸದಲ್ಲೇ ಭರತ್ ಗಾಯಕ್ವಾಡ್ ಈ ಕೃತ್ಯವೆಸಗಿದ್ದಾರೆ. ಮೊದಲು ಪತ್ನಿಯ ತಲೆಗೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಗುಂಡಿನ ಶಬ್ಧಕ್ಕೆ ಎಚ್ಚರಗೊಂಡ ಮಗ ಹಾಗೂ ಸೋದರಳಿಯ ತಮ್ಮ ರೂಮಿನಿಂದ ಬಂದು ನೋಡಿದ್ದಾರೆ. ಅಷ್ಟರಲ್ಲಿ ಮೋನಿ ಸಾವನ್ನಪ್ಪಿದ್ದರು. ಇದೇ ವೇಳೆ ಸೋದರಳಿಯ ದೀಪಕ್ ಮೇಲೂ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಬಳಿಕ ಅದೇ ಪಿಸ್ತೂಲ್ ನಿಂದ ತಾವು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

Cancer Hospital 2
Emergency Service

ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ ಭರತ್ ಗಾಯಕ್ವಾಡ್, ಅಮರಾವತಿಯಲ್ಲಿ ಎಸಿಪಿಯಾಗಿ ನಿಯೋಜನೆಗೊಂಡಿದ್ದರು. ಪುಣೆಯ ತಮ್ಮ ನಿವಾಸಕ್ಕೆ ಬಂದಿದ್ದರು. ಈ ವೇಳೆ ಈ ಘಟನೆ ನಡೆದಿದೆ. ಯಾವ ಕಾರಣಕ್ಕೆ ಗಾಯಕ್ವಾಡ್ ಇಂತಹ ನಿರ್ಧಾರ ಕೈಗೊಂಡರು ಎಂಬುದು ತನಿಖೆಯಿಂದ ತಿಳಿಯಬೇಕಿದೆ ಎಂದಿದ್ದಾರೆ.


Bottom Add3
Bottom Ad 2