Latest

ಫೆಮಿನಾ ಮಿಸ್ ಇಂಡಿಯಾ-2022 ಕಿರೀಟ ಗೆದ್ದ ಕರ್ನಾಟಕದ ಸಿನಿ ಶೆಟ್ಟಿ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಕರ್ನಾಟಕದ ಸಿನಿ ಶೆಟ್ಟಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್-2022 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ವಿ ಎಲ್ ಸಿಸಿ ಫೆಮಿನಾ ಮಿಸ್ ಇಂಡಿಯಾದ ಗ್ರ್ಯಾಂಡ್ ಫಿನಾಲೆಯಲ್ಲಿ ರಾಜ್ಯದ 21 ವರ್ಷದ ಸಿನಿ ಶೆಟ್ಟಿ ಫೆಮಿನಾ ಮಿಸ್ ಇಂಡಿಯಾ ಆಗಿ ಹೊರ ಹೊಮ್ಮಿದ್ದಾರೆ.

ರಾಜಸ್ಥಾನದ ರೂಬಲ್ ಶೇಖಾವತ್, ಫೆಮಿನಾ ಮಿಸ್ ಇಂಡಿಯಾದ ಮೊದಲ ರನ್ನರ್ ಅಪ್ ಆಗಿದ್ದಾರೆ ಹಾಗೂ ಉತ್ತರ ಪ್ರದೇಶದ ಶಿನಾತಾ ಚೌಹಾಣ್ ಫೆಮಿನಾ ಮಿಸ್ ಇಂಡಿಯಾದ ಎರಡನೇ ರನ್ನರ್ ಅಪ್ ಆಗಿದ್ದಾರೆ.

2021ರ ಫೆಮಿನಾ ಮಿಸ್ ಇಂಡಿಯಾ ಮಾನಸ ವಾರಣಾಸಿ ಮಿಸ್ ಇಂಡಿಯಾ-2022ರ ಕಿರೀಟವನ್ನು ಸಿನಿ ಶೆಟ್ಟಿ ಮುಡಿಗೇರಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button