
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಉತ್ತರ ವಲಯದಲ್ಲಿ ಸಂಚಾರ ಸಮಸ್ಯೆಯ ನಿವಾರಣೆ ಮಾಡಲು ಪೊಲೀಸ್ ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ. ಅಪಘಾತದ ಸಂಖ್ಯೆಗಳು ಕಳೆದ ಮೂರು ತಿಂಗಳಿನಿಂದ ಕಡಿಮೆಯಾಗಿದೆ ಎಂದು ಟ್ರಾಫೀಕ್ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಗರ ಪ್ರದೇಶಗಳಲ್ಲಿ ಕುಡಿದು ವಾಹನ ಚಲಾವಣೆ ಮಾಡುವವರ ವಿರುದ್ಧ ಕ್ರಮ ಜರುಗಿಸಲು ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದರು.
ಬೆಳಗಾವಿ ನಗರದಲ್ಲಿ ಆಟೋ ಮೀಟರ್ ಅಳವಡಿಕೆ ಮಾಡುವ ಕುರಿತು ಸಾರ್ವಜನಿಕರ ಬಹುವರ್ಷಗಳ ಬೇಡಿಕೆ ಇದೆ. ಅದನ್ನು ಕಾಲಮೀತಿಯಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದರು.
ಪೊಲೀಸ್ ಸಿಬ್ಬಂದಿಗಳು ಕಡ್ಡಾಯವಾಗಿ ಹೆಲ್ಮೆಟ್ ಹಾಕಿ ಬೈಕ್ ಚಲಾಯಿಸಬೇಕು. ಅಲ್ಲದೆ ಸಾರ್ವಜನಿಕರು ಸಹ ಹೆಲ್ಮೆಟ್ ಕಡ್ಡಾಯ ಹಾಕಿಕೊಳ್ಳಬೇಕು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ