Film & EntertainmentKannada NewsKarnataka NewsLatest

*ಚಿತ್ರೀಕರಣದ ಬಿಡುವಿನಲ್ಲಿ ಹುಟ್ಟೂರಿಗೆ ಭೇಟಿ ನೀಡಿದ ಡಾಲಿ ಧನಂಜಯ*

ಪ್ರಗತಿವಾಹಿನಿ ಸುದ್ದಿ; ಹಾಸನ: ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್, ಚಿತ್ರೀಕರಣದ ಬಿಡುವಿನಲ್ಲಿದ್ದು, ಹುಟ್ಟೂರಿಗೆ ಭೇಟಿ ನೀಡಿದ್ದಾರೆ. ಅರಸಿಕೆರೆಯ ಯಾದಾಪುರದ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದಿದ್ದಾರೆ.

ತಂದೆ ಅಡವಿಸ್ವಾಮಿ ಹಾಗೂ ಸಹೋದರರ ಜೊತೆ ದೇವಸ್ಥಾನದಲ್ಲಿ ನಟ ಧನಂಜಯ್ ವಿಶೇಷ ಪೂಜೆ ಸಲ್ಲಿಸಿದರು. ಸಹೋದರರ ಜೊತೆ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿ ಬಾಲ್ಯದ ನೆನಪಿಗೆ ಜಾರಿದರು.

ಪರಮೇಶ್ವರ್ ಗುಂಡ್ಕಲ್ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸುತ್ತಿರುವ ಡಾಲಿ ಧನಂಜಯ್, ಮೈಸೂರಿನಲ್ಲಿ ಶೂಟಿಂಗ್ ನಲ್ಲಿ ಭಾಗಿಯಾಗಿದ್ದು, ಈ ವೇಳೆ ಚಿತ್ರೀಕರಣದ ಮಧ್ಯೆ ಕೆಲ ಸಮಯ ಬಿಡುವು ಮಾಡಿಕೊಂಡು ಹುಟ್ಟೂರಿಗೆ ಭೇಟಿ ನೀಡಿದರು.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button