Film & Entertainment

*ನಟ, ನಿರ್ಮಾಪಕ ಸುದೀಪ್ ಪಾಂಡೆ ಹೃದಯಘಾತದಿಂದ ನಿಧನ*

ಪ್ರಗತಿವಾಹಿನಿ ಸುದ್ದಿ: ಖ್ಯಾತ ಭೋಜ್ಪುರಿ ಭಾಷೆಯ ನಟ ಹಾಗೂ ನಿರ್ಮಾಪಕ ಸುದೀಪ್ ಪಾಂಡೆಯವರು, ಶೂಟಿಂಗ್ ನಡೆಸುತ್ತಿದ್ದ ವೇಳೆ ಹೃದಯಾಘಾಯದಿಂದ ನಿಧನ ಹೊಂದಿದ್ದಾರೆ.‌

ಭೋಜ್ಪುರಿ ಭಾಷೆಯ ನಟ ಹಾಗೂ ನಿರ್ಮಾಪಕ ಸುದೀಪ್ ಪಾಂಡೆ ಅವರಿಗೆ ಹೃದಯಾಘಾತವಾಗಿದೆ. ಸುದೀಪ್ ಪಾಂಡೆ ನಿಧನದಿಂದ ಅವರ ಅಭಿಮಾನಿಗಳಿಗೆ ಹಾಗೂ ಭೋಜ್ಪುರಿ ಇಂಡಸ್ಟ್ರಿಗೆ ಬರಸಿಡಿಲು ಬಡಿದಂತೆ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಲಾಗುತ್ತಿದೆ.

ಜನವರಿ 15ರಂದು ಸುದೀಪ್ ಪಾಂಡೆಗೆ ಹೃದಯಾಘಾತ ಆಗಿದೆ. ಅವರು ಆ ಸಂದರ್ಭದಲ್ಲಿ ಮುಂಬೈನಲ್ಲಿ ಇದ್ದರು. ಅವರ ನಿಧನ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಅವರು ಹಲವು ವರ್ಷಗಳಿಂದ ಭೋಜ್ಪುರಿ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದರು. ನಟನೆಯ ಜೊತೆಗೆ ನಿರ್ಮಾಣದಲ್ಲೂ ಅವರು ತೊಡಗಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅವರ ಆಪ್ತರು ಈ ವಿಚಾರ ಖಚಿತಪಡಿಸಿದ್ದಾರೆ. ಅವರ ಸಾವು ಭೋಜ್ಪುರಿ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button