Latest

ನಟ ವಿಜಯ್ ದೇವರಕೊಂಡಗೆ ಇಡಿ ವಿಚಾರಣೆ

ಪ್ರಗತಿವಾಹಿನಿ ಸುದ್ದಿ, ಹೈದರಾಬಾದ್: ಬಾಲಿವುಡ್ ನ ‘ಲೈಗರ್’ ಚಿತ್ರಕ್ಕೆವಿದೇಶದಿಂದ ಧನಸಹಾಯಕ್ಕಾಗಿ ವಿಜಯ್ ದೇವರಕೊಂಡ ಅವರನ್ನು ಇಡಿ ಸುದೀರ್ಘ ವಿಚಾರಣೆಗೆ ಗುರಿಪಡಿಸಿದೆ.

ಸಂಸ್ಥೆಯು ಕೆಲವು ದಿನಗಳ ಹಿಂದೆ ಚಲನಚಿತ್ರ ನಿರ್ಮಾಪಕ ಪುರಿ ಜಗನ್ನಾಥ್ ಮತ್ತು ನಿರ್ಮಾಪಕಿ ಚಾರ್ಮಿ ಕೌರ್‌ಗೆ ಸಮನ್ಸ್ ನೀಡಿತ್ತು ಎಂದು ವರದಿಗಳು ತಿಳಿಸಿವೆ.

Home add -Advt

ತೆಲಂಗಾಣದ ರಾಜಕಾರಣಿಯೊಬ್ಬರು ವಿದೇಶದಿಂದ ಪಡೆದ ಕೋಟಿಗಟ್ಟಲೆ ಹಣವನ್ನು ಚಿತ್ರಕ್ಕೆ ಹೂಡಿಕೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.

ಅನನ್ಯಾ ಪಾಂಡೆ ಮತ್ತು ಅಮೆರಿಕದ ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ನಟಿಸಿರುವ ಈ ಚಿತ್ರವು ಸುಮಾರು 100 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಆದರೆ, ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೊಂದು ಸದ್ದು ಮಾಡಲಿಲ್ಲ. ಇದು ದೇವರಕೊಂಡ ಅವರ ಚೊಚ್ಚಲ ಬಾಲಿವುಡ್ ಪ್ರಾಜೆಕ್ಟ್ ಆಗಿತ್ತು.

ಮರಾಠಿ ಪುಂಡ ವಿದ್ಯಾರ್ಥಿಗಳ ಬಂಧನಕ್ಕೆ ಆಗ್ರಹ; ಪೊಲೀಸರ ವಿರುದ್ಧವೂ ಕ್ರಮಕ್ಕೆ ಒತ್ತಾಯ; ಕರವೇ ಪ್ರತಿಭಟನೆ

Related Articles

Back to top button