Film & EntertainmentKannada NewsKarnataka News

*ನಟ ವಿನೋದ್ ರಾಜ್ ಆಸ್ಪತ್ರೆಗೆ ದಾಖಲು*

ಪ್ರಗತಿವಾಹಿನಿ ಸುದ್ದಿ: ಸ್ಯಾಂಡಲ್‌ವುಡ್ ನಟ ವಿನೋದ್ ರಾಜ್ ಅವರು ಆರೋಗ್ಯ ಸಮಸ್ಯೆ ಹಿನ್ನಲೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಇಂದು ಏಕಾಏಕಿ ಆರೋಗ್ಯದಲ್ಲಿ ಏರುಪೇರು ಆದ ಕಾರಣ ಬೆಂಗಳೂರಿನ ನೆಲಮಂಗಲ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟ ವಿನೋದ್ ರಾಜ್‌ಗೆ ಅವರು ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದು ಅವರಿಗೆ ತುರ್ತು ಆಗಿ ಹರ್ನಿಯಾ ಆಪರೇಷನ್ ನಡೆಸಬೇಕಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಈ ಸಂಬಂಧ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

Home add -Advt

ಹರ್ನಿಯಾ ಎಂದರೇನು?: ಪುರುಷರಲ್ಲಿ ಹರ್ನಿಯಾ ಉಂಟಾದಾಗ ಸಾಮಾನ್ಯವಾಗಿ ತೊಡೆ ಸುಂದುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ, ಇನ್ನು ಮಹಿಳೆಯರಲ್ಲಿ ಹೊಕ್ಕಳಿನ ಜಾಗದಲ್ಲಿ ನೋವಾಗಬಹುದು. ಕೆಲವೊಂದು ಬಾರಿ ಅತಿಯಾದ ತೂಕ ಅಥವಾ ಹೆಚ್ಚಾದ ಕೆಮ್ಮು ಇದ್ದಾಗ ನಿಮ್ಮ ಹೊಟ್ಟೆಯ ಭಾಗಕ್ಕೆ ಬಹಳಷ್ಟು ಒತ್ತಡ ಬೀಳುತ್ತದೆ ಹಾಗೂ ಇದು ಹೊಕ್ಕಳು ಬಳ್ಳಿಯ ಹರ್ನಿಯಾವನ್ನು ಉಂಟು ಮಾಡುತ್ತದೆ. ಹರ್ನಿಯಾ ಕೂಡ ಒತ್ತಡ ಹಾಗೂ ಸ್ನಾಯುಗಳ ಸೆಳೆತದಿಂದ ಉಂಟಾಗಬಹುದು.

Related Articles

Back to top button