Latest

200 ಕೋಟಿ ಸುಲಿಗೆ ಆರೋಪಿ ಸುಕೇಶ್ ಚಂದ್ರಶೇಖರ್ ಚಕ್ಕರ್ ನಲ್ಲಿ ಸಿಲುಕಿದ ನಟಿ ನೋರಾ ಫತೇಹಿ ಭಾವ

ಪ್ರಗತಿವಾಹಿನಿ ಸುದ್ದಿ, ಮುಂಬೈ: ನಟಿ, ಡ್ಯಾನ್ಸರ್ ನೋರಾ ಫತೇಹಿ ಅವರ ಭಾವ ಬಾಬಿ ಅವರು ಸುಕೇಶ್ ಚಂದ್ರಶೇಖರ್ ನಿಂದ  65 ಲಕ್ಷ ರೂ. ಮೌಲ್ಯದ ಬಿಎಂಡಬ್ಲ್ಯು ಕಾರು ಉಡುಗೊರೆಯಾಗಿ ಸ್ವೀಕರಿಸಿರುವ ವಿಷಯ ಬಹಿರಂಗಗೊಂಡಿದೆ.

ಬಾಬಿ ಮತ್ತು ಸುಕೇಶ್ ಅವರ ಸಹಾಯಕಿ ಪಿಂಕಿ ಇರಾನಿ ಅವರನ್ನು ದೆಹಲಿ ಪೋಲೀಸ್ ಆರ್ಥಿಕ ಅಪರಾಧ ವಿಭಾಗದವರು ಜಂಟಿಯಾಗಿ ತನಿಖೆಗೆ ಗುರಿಪಡಿಸಿದ ವೇಳೆ ಈ ವಿಷಯ ಹೊರಬಂದಿದೆ.

ನೋರಾ ಅವರು ಸುಕೇಶ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿಲ್ಲ. ಆದರೆ ವಾಟ್ಸಾಪ್ ಮೂಲಕ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಒಡನಾಡಿ ಸುಕೇಶ್ 200 ಕೋಟಿ ರೂ. ಸುಲಿಗೆ ಪ್ರಕರಣದ ಆರೋಪಿಯಾಗಿದ್ದಾನೆ.

‘ಬ್ರಹ್ಮಾಸ್ತ್ರ’ ರಣಬೀರ್ ಅವರ ಅತಿ ಹೆಚ್ಚು ಗಳಿಕೆಯ ಎರಡನೇ ಚಿತ್ರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button