Belagavi NewsBelgaum NewsFilm & EntertainmentKannada NewsKarnataka NewsNationalPolitics

*ನಟಿ ರುಕ್ಕಿಣಿ ವಸಂತ್ ಅವರ ಡೀಪ್‌ಫೇಕ್ ಪ್ರಕರಣ: ಕಿಡಿಗೇಡಿಗಳಿಗೆ ಬಿಗ್ ಶಾಕ್ ನೀಡಿದ ಸಿಸಿಬಿ ಪೊಲೀಸ್*

ಪ್ರಗತಿವಾಹಿನಿ ಸುದ್ದಿ: ಬಹುಭಾಷಾ ನಟಿ ರುಕ್ಕಿಣಿ ವಸಂತ್ ಅವರ ಡೀಪ್‌ಫೇಕ್ ಮಾಡಿ ನಕಲಿ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಆರೋಪಿಗಳಿಗೆ ಬೆಂಗಳೂರು ಸಿಸಿಬಿ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ.

ನಟಿಯ ತೇಜೋವಧೆ ಮಾಡಲು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಸೃಷ್ಟಿಸಲಾಗಿದ್ದ ಡೀಪ್‌ಫೇಕ್ ಈಜುಡುಗೆ (ಬಿಕಿನಿ) ವಿಡಿಯೋ ಸೃಷ್ಠಿಸಲಾಗಿತ್ತು.‌,

ತಮ್ಮ ಘನತೆ ಮತ್ತು ಗೌರವಕ್ಕೆ ಧಕ್ಕೆ ತಂದಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ನಟಿ ರುಕ್ಕಿಣಿ ವಸಂತ್ ನೀಡಿದ ಲಿಖಿತ ದೂರನ್ನು ಆಧರಿಸಿ ಪೊಲೀಸರು ಈ ಹೈ-ಪ್ರೊಫೈಲ್ ಎಫ್‌ಐಆರ್ ದಾಖಲಿಸಿಕೊಂಡಿದ್ದರು.‌

ಸಧ್ಯ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಬರೋಬ್ಬರಿ 29ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣಗಳ ಖಾತೆಗಳ ವಿರುದ್ಧ ಅಧಿಕೃತವಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಟಿ ರುಕ್ಕಿಣಿ ವಸಂತ್ ಅವರು ಈಜುಡುಗೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿರುವ ಮಾದರಿಯ ವಿಡಿಯೋವೊಂದು ಭಾರಿ ಪ್ರಮಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಸಿನೆಮಾ ವಲಯ ಹಾಗೂ ಅಭಿಮಾನಿಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗುತ್ತಿದ್ದಂತೆ ಸ್ವತಃ ರಂಗಪ್ರವೇಶ ಮಾಡಿದ್ದ ನಟಿ ರುಕ್ಕಿಣಿ, ಅದು ತನ್ನ ಅಸಲಿ ವಿಡಿಯೋ ಅಲ್ಲವೇ ಅಲ್ಲ ಎಂದು ಸ್ಪಷ್ಟಪಡಿಸಿದ್ದರು.

ಆಧುನಿಕ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು, ಬೇರೆ ಯಾರೋ ಮಾಡಿದ್ದ ವಿಡಿಯೋಗೆ ತನ್ನ ಭಾವಚಿತ್ರವನ್ನು ಜೋಡಿಸಿ ಅತ್ಯಂತ ಅಶ್ಲೀಲವಾಗಿ ಡೀಪ್‌ಫೇಕ್ ಮಾಡಲಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದರು. 

ಈ ಬೆನ್ನಲ್ಲೇ ಸೈಬರ್ ಪೊಲೀಸರ ಮೆಟ್ಟಿಲೇರಿದ್ದ ನಟಿಯ ಮನವಿಯಂತೆ ತನಿಖೆ ಕೈಗೆತ್ತಿಕೊಂಡಿರುವ ಅಧಿಕಾರಿಗಳು, ಈ ನಕಲಿ ವಿಡಿಯೋವನ್ನು ಅತಿ ಹೆಚ್ಚು ಪ್ರಚಾರ ಮಾಡಿದ ಹಾಗೂ ಮೊದಲು ಹರಿಬಿಟ್ಟ 9 ಇನ್‌ಸ್ಟಾಗ್ರಾಂ ಖಾತೆಗಳು, 14 ಎಕ್ಸ್ ಖಾತೆಗಳು ಹಾಗೂ 6 ಫೇಸ್‌ಬುಕ್ ಪೇಜ್‌ಗಳು ಸೇರಿದಂತೆ ಒಟ್ಟು 29 ಖಾತೆದಾರರನ್ನು ಆರೋಪಿಗಳೆಂದು ಹೆಸರಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button