Latest

ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾದ ನಟಿ ಶೋಂಕಾ ದುಕುರೆ

ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: ‘ಎಲ್ವಿಸ್’ ನಟಿ ಶೋಂಕಾ ದುಕುರೆ ಅವರು ಯುಎಸ್ ನ ತಮ್ಮ ಅಪಾರ್ಟ್ ಮೆಂಟ್ ನಲ್ಲಿ  ಶುಕ್ರವಾರ ತಡರಾತ್ರಿ ಶವವಾಗಿ ಪತ್ತೆಯಾಗಿದ್ದಾರೆ.

ಅವರಿಗೆ 44 ವರ್ಷ ವಯಸ್ಸಾಗಿತ್ತು. ಇದೇ ವರ್ಷ ಬಿಡುಗಡೆಯಾಗಿದ್ದ ‘ಎಲ್ವಿಸ್’ ಚಿತ್ರದಲ್ಲಿ ‘ಬಿಗ್ ಮಾಮಾ ಥಾರ್ನ್ಟನ್’ ಪಾತ್ರ ನಿರ್ವಹಿಸಿದ ನಟಿ ಶೋಂಕಾ ದುಕುರೆ  ಅವರು ತಮ್ಮ ಇಬ್ಬರು ಚಿಕ್ಕ ಮಕ್ಕಳೊಂದಿಗೆ ವಾಸವಾಗಿದ್ದ  ತಮ್ಮ ಅಪಾರ್ಟ್ ಮೆಂಟ್ ನ ಬೆಡ್ ರೂಮ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಅವರ ಸಾವು ಸಹಜವಾಗಿದ್ದು ಅಧಿಕಾರಿಗಳು ಯಾವುದೇ  ಅನುಮಾನ ಗಳಿಲ್ಲ, ಆದಾಗ್ಯೂ, ಅವರು ಸಾವಿನ ಅಧಿಕೃತ ಕಾರಣಕ್ಕಾಗಿ ಶವಪರೀಕ್ಷೆಯ ಫಲಿತಾಂಶದ ನಿರೀಕ್ಷೆಯಲ್ಲಿರುವುದಾಗು ನ್ಯಾಶ್ ವಿಲ್ಲೆ ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾರೆ.

ತಮ್ಮ ಕಂಚಿನ ಕಂಠ, ಅದ್ಭುತ ಅಭಿನಯದಿಂದ ಅವರು ಜಗತ್ತಿನ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿದ್ದರು.

Home add -Advt

75 ಸಾವಿರ ಜನರಿಂದ 75 ಕಿಮೀ ಕಾಲ್ನಡಿಗೆ – ಕಿತ್ತೂರಲ್ಲಿ ಡಿ.ಕೆ.ಶಿವಕುಮಾರ ಹೇಳಿಕೆ

Related Articles

Back to top button