ಪ್ರಗತಿವಾಹಿನಿ ಸುದ್ದಿ: ಏಷ್ಯಾದ ಸಿರಿವಂತರ ಪಟ್ಟಿಯಲ್ಲಿ ಸದಾ ಮೊದಲ ಸ್ಥಾನ ಕಾಪಾಡಿಕೊಂಡು ಬಂದಿದ್ದ ಭಾರತದ ಔದ್ಯೋಗಿಕ ಕ್ಷೇತ್ರದ ದಿಗ್ಗಜ ಮುಕೇಶ್ ಅಂಬಾನಿ ಅವರನ್ನು ಮೊದಲ ಬಾರಿಗೆ ಅದಾನಿ ಗ್ರೂಫ್ಸ್ನ ಚೇರ್‌ಮನ್ ಗೌತಮ್ ಅದಾನಿ ಹಿಂದಿಕ್ಕಿದ್ದಾರೆ. 88.5 ಬಿಲಿಯನ್ ಡಾಲರ್ ಆದಾಯದೊಂದಿಗೆ ಗೌತಮ್ ಅದಾನಿ ಈಗ ಏಷ್ಯಾದ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಬ್ಲೂಮ್‌ಬರ್ಗ್ ಹೊರತರುವ ವಿಶ್ವದ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದ್ದು ಗೌತಮ್ ಅದಾನಿ ಏಷ್ಯಾದಲ್ಲಿ ಮೊದಲ ಸ್ಥಾನ ಹಾಗೂ ವಿಶ್ವದಲ್ಲಿ 10ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇದೇ ವೇಳೆ 87.9 ಬಿಲಿಯನ್ ಡಾಲರ್ ಆದಾಯ ಹೊಂದಿರುವ ಮುಖೇಶ್ ಅಂಬಾನಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.
12 ಬಿಲಿಯನ್ ಡಾಲರ್ ಆದಾಯ
ಗೌತಮ್ ಅದಾನಿ ಆದಾಯದಲ್ಲಿ ಕಳೆದ ಜನೇವರಿಯಿಂದ ಈವರೆಗೆ 12 ಬಿಲಿಯನ್ ಡಾಲರ್ ಏರಿಕೆಯಾಗಿದೆ. ಇದೇ ವೇಳೆ ಮುಖೇಶ್ ಅಂಬಾನಿಯ ಆದಾಯದಲ್ಲಿ ಇದೇ ಅವಧಿಯಲ್ಲಿ 2.07 ಬಿಲಿಯನ್ ಡಾಲರ್ ಇಳಿಕೆಯಾಗಿದೆ. ಗೌತಮ್ ಅದಾನಿ ಅವರು ಬಂದರು, ಜಲ ಸಾರಿಗೆ, ಮತ್ತು ನಿರ್ಮಾಣ ಉದ್ಯಮಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಿದ್ದು ಫಲ ನೀಡಿದೆ. ಅವರ ಕಂಪನಿಗಳ ಶೇರ್‌ಗಳು ಕಳೆದ 2 ವರ್ಷದಲ್ಲಿ ಶೇ.600 ರಷ್ಟು ಏರಿಕೆಯಾಗಿದೆ ಎಂದು ಬ್ಲೂಮ್ ಬರ್ಗ್ ವರದಿ ತಿಳಿಸಿದೆ.
14 ವರ್ಷದ ಬಳಿಕ 2 ನೇ ಸ್ಥಾನ
ಇನ್ನು ವಿಶ್ವದ ಕುಬೇರರಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ 2015 ರ ಕೆಲ ದಿನಗಳನ್ನು ಹೊರತುಪಡಿಸಿ ನಿರಂತರ 14 ವರ್ಷಗಳಿಂದ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. 2015 ರಲ್ಲಿ ಕೆಲವೇ ದಿನಗಳ ಅವಧಿಗೆ ಸನ್ ಫಾರ್ಮಾದ ದಿಲೀಪ್ ಸಾಂಘ್ವಿ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೆ ಏರಿದ್ದರು. ಬಳಿಕ ಮುಖೇಶ್ ಅಂಬಾನಿ ಮೊದಲ ಸ್ಥಾನದಲ್ಲಿ ವಿರಾಜಮಾನರಾಗಿದ್ದರು.
ಕಾಲೇಜು ಧ್ವಜ ಸ್ತಂಭದಲ್ಲಿ ಕೇಸರಿ ಬಾವುಟ ಹಾರಿಸಿ ವಿದ್ಯಾರ್ಥಿಗಳ ಪ್ರತಿಭಟನೆ; ಮತ್ತೊಂದೆಡೆ ಕಲ್ಲು ತೂರಾಟ
ಮಹಾಭಾರತದ ಭೀಮ ಇನ್ನಿಲ್ಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ