Karnataka News

*ಹಲವು ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಸೇರ್ಪಡೆ* *ವಿವರ ನೋಡಿ*

ಪ್ರಗತಿ ವಾಹಿನಿ ಸುದ್ದಿ, ಹುಬ್ಬಳ್ಳಿ: ನೈಋತ್ಯ ರೈಲ್ವೇ ವ್ಯಾಪ್ತಿಯಲ್ಲಿ ಸಂಚರಿಸುವ ವಿವಿಧ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ.
ವಿವರ ಇಂತಿದೆ: 
1. ಡಿಸೆಂಬರ್ 25. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 07658 ಎಸ್‌.ಎಸ್‌.ಎಸ್ ಹುಬ್ಬಳ್ಳಿ – ತಿರುಪತಿ ದೈನಂದಿನ ವಿಶೇಷ ಪ್ಯಾಸೆಂಜರ್ ರೈಲಿಗೆ ಐದು ಸಾಮಾನ್ಯ ಎರಡನೇ ದರ್ಜೆಯ ಬೋಗಿಗಳನ್ನು ಹೆಚ್ಚಿಸಲಾಗುತ್ತದೆ.
2. ಡಿಸೆಂಬರ್ 24. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 07657 ತಿರುಪತಿ – ಎಸ್‌.ಎಸ್‌.ಎಸ್ ಹುಬ್ಬಳ್ಳಿ ದೈನಂದಿನ ವಿಶೇಷ ಪ್ಯಾಸೆಂಜರ್ ರೈಲಿಗೆ ಐದು ಸಾಮಾನ್ಯ ಎರಡನೇ ದರ್ಜೆಯ ಬೋಗಿಗಳನ್ನು ಹೆಚ್ಚಿಸಲಾಗುತ್ತದೆ.
3. ಡಿಸೆಂಬರ್ 29. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 17319 ಎಸ್‌ಎಸ್‌ಎಸ್ ಹುಬ್ಬಳ್ಳಿ – ಹೈದರಾಬಾದ್ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ಒಂದು ಸ್ಲೀಪರ್ ಕ್ಲಾಸ್ ಬೋಗಿಯನ್ನು ಹೆಚ್ಚಿಸಲಾಗುವುದು.
4. ಡಿಸೆಂಬರ್ 30. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 17320 ಹೈದರಾಬಾದ್ – ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ಒಂದು ಸ್ಲೀಪರ್ ಕ್ಲಾಸ್ ಬೋಗಿಯನ್ನು ಹೆಚ್ಚಿಸಲಾಗುವುದು.
5. ಡಿಸೆಂಬರ್ 31. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 17317 ಎಸ್‌ಎಸ್‌ಎಸ್ ಹುಬ್ಬಳ್ಳಿ – ದಾದರ್ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ಒಂದು ಸ್ಲೀಪರ್ ಕ್ಲಾಸ್ ಬೋಗಿಯನ್ನು ಹೆಚ್ಚಿಸಲಾಗುವುದು.
6. ಜನವರಿ 01. 2023 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 17318 ದಾದರ್ – ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ಒಂದು ಸ್ಲೀಪರ್ ಕ್ಲಾಸ್ ಬೋಗಿಯನ್ನು ಹೆಚ್ಚಿಸಲಾಗುವುದು.
7. ಡಿಸೆಂಬರ್ 28. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 12028 ಕೆ.ಎಸ್.ಆರ್ ಬೆಂಗಳೂರು – ಎಮ್.ಜಿ.ಆರ್ ಚೆನ್ನೈ ಸೆಂಟ್ರಲ್ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿಗೆ ಒಂದು ಹವಾನಿಯಂತ್ರಿತ ಎಕ್ಸಿಕ್ಯುಟಿವ್ ಚೇರ್ ಕಾರ್ ಮತ್ತು ಒಂದು ಹವಾನಿಯಂತ್ರಿತ ಚೇರ್ ಕಾರ್ ಬೋಗಿಗಳನ್ನು ಹೆಚ್ಚಿಸಲಾಗುತ್ತದೆ.
8. ಡಿಸೆಂಬರ್ 28. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 12027 ಎಮ್.ಜಿ.ಆರ್ ಚೆನ್ನೈ ಸೆಂಟ್ರಲ್ – ಕೆ.ಎಸ್.ಆರ್ ಬೆಂಗಳೂರು ಶತಾಬ್ದಿ ಎಕ್ಸ್‌ಪ್ರೆಸ್ ರೈಲಿಗೆ ಒಂದು ಹವಾನಿಯಂತ್ರಿತ ಎಕ್ಸಿಕ್ಯುಟಿವ್ ಚೇರ್ ಕಾರ್ ಮತ್ತು ಒಂದು ಹವಾನಿಯಂತ್ರಿತ ಚೇರ್ ಕಾರ್ ಬೋಗಿಗಳನ್ನು ಹೆಚ್ಚಿಸಲಾಗುತ್ತದೆ.
9. ಡಿಸೆಂಬರ್ 25. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 12257 ಯಶವಂತಪುರ – ಕೊಚುವೇಲಿ ಗರೀಬ್ ರಥ ಎಕ್ಸ್‌ಪ್ರೆಸ್ ರೈಲಿಗೆ ಎರಡು ಎಸಿ 3 ಟೈರ್ (ಗರೀಬ್ ರಥ) ಸ್ಲೀಪರ್ ಬೋಗಿಗಳನ್ನು ಹೆಚ್ಚಿಸಲಾಗುತ್ತದೆ.
10. ಡಿಸೆಂಬರ್ 26. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 12258 ಕೊಚುವೇಲಿ – ಯಶವಂತಪುರ ಗರೀಬ್ ರಥ ಎಕ್ಸ್‌ಪ್ರೆಸ್ ರೈಲಿಗೆ ಎರಡು ಎಸಿ 3 ಟೈರ್ ಸ್ಲೀಪರ್ (ಗರೀಬ್ ರಥ) ಬೋಗಿಗಳನ್ನು ಹೆಚ್ಚಿಸಲಾಗುತ್ತದೆ.
11. ಡಿಸೆಂಬರ್ 28. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 16511 ಕೆ.ಎಸ್.ಆರ್ ಬೆಂಗಳೂರು – ಕಣ್ಣೂರು ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ಒಂದು 2ನೇ ಹವಾನಿಯಂತ್ರಿತ ದರ್ಜೆ, ಒಂದು 3ನೇ ಹವಾನಿಯಂತ್ರಿತ ದರ್ಜೆ ಮತ್ತು ಒಂದು ಸ್ಲೀಪರ್ ದರ್ಜೆ ಬೋಗಿಗಳನ್ನು ಹೆಚ್ಚಿಸಲಾಗುತ್ತದೆ.
12. ಡಿಸೆಂಬರ್ 29. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 16512 ಕಣ್ಣೂರು – ಕೆ.ಎಸ್.ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ಒಂದು 2ನೇ ಹವಾನಿಯಂತ್ರಿತ ದರ್ಜೆ, ಒಂದು 3ನೇ ಹವಾನಿಯಂತ್ರಿತ ದರ್ಜೆ ಮತ್ತು ಒಂದು ಸ್ಲೀಪರ್ ದರ್ಜೆ ಬೋಗಿಗಳನ್ನು ಹೆಚ್ಚಿಸಲಾಗುತ್ತದೆ ಎಂದು ನೈಋತ್ಯ ರೈಲ್ವೇ ಹುಬ್ಬಳ್ಳಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button