Latest

ಆಡಳಿತ ಸುಧಾರಣಾ ಆಯೋಗದ ವರದಿಗಳು ಸರಕಾರಕ್ಕೆ ಸಲ್ಲಿಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಎರಡನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ 4 ಮತ್ತು 5 ನೇ ವರದಿಗಳನ್ನು ಸರಕಾರಕ್ಕೆ ಸಲ್ಲಿಸಲಾಗಿದೆ.

ಆಯೋಗದ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಎರಡೂ ವರದಿಗಳನ್ನು ಸಲ್ಲಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ  ಇಲಾಖೆಗೆ ಸಂಬಂಧಿಸಿದಂತೆ 99, ಶಾಲಾ ಶಿಕ್ಷಣ, ಸಾಕ್ಷರತೆ (152), ಉನ್ನತ ಶಿಕ್ಷಣ (140), ಆರೋಗ್ಯ ಮತ್ತು ಕುಟುಂಬ ಕಲ್ಯಾಣ (182), ವೈದ್ಯಕೀಯ ಶಿಕ್ಷಣ (96), ಯುವ ಸಬಲೀಕರಣ ಮತ್ತು ಕ್ರೀಡೆ (33), ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ (102), ಕಾರ್ಮಿಕ (136) ಸೇರಿದಂತೆ 4ನೇ ಆಯೋಗದ ವರದಿಯ 940 ಶಿಫಾರಸುಗಳನ್ನು ಒಳಗೊಂಡಿದೆ.

ಕೃಷಿ(97), ತೋಟಗಾರಿಕೆ (73), ರೇಷ್ಮೆ (32), ಮೀನುಗಾರಿಕೆ (60), ಸಹಕಾರ (168), ಸಾಮಾನ್ಯ ಶಿಫಾರಸುಗಳು (27), ಗ್ರಾಮೀಣ ಕೋಟಾ ಮಾರ್ಪಾಡು (1), ಆಡಳಿತಾತ್ಮಕ ಮತ್ತು ಆರ್ಥಿಕ ಅಧಿಕಾರಗಳ ಪ್ರತ್ಯಾಯೋಜನೆ (17), ಇ- ಪ್ರೊಕ್ಯೂರ್ ಮೆಂಟ್ ಗೆ ಸಂಬಂಧಿಸಿದ (6), ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸಂಬಂಧಿಸಿ (27), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮರುಸಂಘಟನೆ( 13), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆನೇಜ್ ಮೆಂಟ್ ಬೆಂಗಳೂರು, ಅಧ್ಯಯನ ವರದಿಗೆ ಸಂಬಂಧಿಸಿ (38), ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಆ್ಯಂಡ್ ಎಕಾನಾಮಿಕ್  ಚೇಂಜ್ ಅಧ್ಯಯನ ವರದಿಗೆ ಸಂಬಂಧಿಸಿ (30), ಕಾರ್ಯ ಸುಧಾರಣಾ ತಂಡಗಳ ರಚನೆ (1), ಪಾಲುದಾರರ ಪರಿಷತ್ತುಗಳ ಸ್ಥಾಪನೆ (1) ಶಿಫಾರಸನ್ನು 5ನೇ ಆಯೋಗದ ವರದಿ ಒಳಗೊಂಡಿದೆ.

ಈ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಗೃಹ ಇಲಾಖೆ ಎಸಿಎಸ್ ರಜನೀಶ್ ಗೋಯಲ್ ಹಾಗೂ ಪ್ರಸನ್ನ ಕುಮಾರ್ ಹಾಜರಿದ್ದರು.

ಮಂಗಮಾಯವಾಗಿದ್ದ ಮಹಾರಾಷ್ಟ್ರ ಸರ್ಕಾರಿ ಬಸ್ ಕರ್ನಾಟಕದಲ್ಲಿ ಪತ್ತೆ!

https://pragati.taskdun.com/stolen-maharashtra-government-bus-found-in-karnataka/

ಬಿಬಿಸಿ ಸಾಕ್ಷ್ಯಚಿತ್ರ; ಇಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ

https://pragati.taskdun.com/bbc-documentary-hearing-in-the-supreme-court-today/

*ಭೀಕರ ಅಪಘಾತ; ಆಸ್ಪತ್ರೆ ತಲುಪುವ ಮೊದಲೇ ಮಾರ್ಗ ಮಧ್ಯೆಯೇ ಪ್ರಾಣಬಿಟ್ಟ ಕಂದಮ್ಮ*

https://pragati.taskdun.com/accidentkiddeathtipaturufathermother-critical/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button