
ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ದೇಶದಲ್ಲಿ ಮಗುವನ್ನು ದತ್ತು ಪಡೆಯಲು ಸುಮಾರು 28,663 ಭಾರತೀಯರು ಕಾಯುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅನಿವಾಸಿ ಹಾಗೂ ಸಾಗರೋತ್ತರ ಭಾರತೀಯರು ಸೇರಿದಂತೆ 1,030 ವಿದೇಶಿ ಅರ್ಜಿದಾರರು ಮಗು ದತ್ತು ಪಡೆಯಲು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (CARA) ದಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಮಕ್ಕಳ ದತ್ತು ಪಡೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ಇಲ್ಲ’ ಎಂದು ಉತ್ತರಿಸಿದರಲ್ಲದೆ 2021-22 ರಲ್ಲಿ, ಒಟ್ಟು 2,991 ದತ್ತು ಪ್ರಕರಣಗಳನ್ನು ದಾಖಲಿಸಲಾಗಿದೆ. ಇವುಗಳಲ್ಲಿ 414 ಪ್ರಕರಣಗಳು ದೇಶದಲ್ಲಿ ಆಂತರಿಕವಾಗಿ ನಡೆದಿವೆ ಎಂದರು.
https://pragati.taskdun.com/latest/chiefjustice-supremecourt-media-kangaroocourt-democrocy/
ಮಾಧ್ಯಮಗಳ ಕಾಂಗರೂ ನ್ಯಾಯಾಲಯ ಪ್ರಜಾಪ್ರಭುತ್ವಕ್ಕೆ ಮಾರಕ: ಸಿಜೆಐ