Belagavi NewsBelgaum NewsEducationKannada NewsKarnataka NewsLatest

ಸುಧಾರಿತ ಕೃತಕ ಬುದ್ಧಿಮತ್ತೆಯು ಕೈಗಾರಿಕಾ ಕ್ರಾಂತಿಗೆ ಕಾರಣವಾಗಲಿದೆ ; ಕೆಎಲ್‌ಎಸ್ ಜಿಐಟಿಯಲ್ಲಿ ಪ್ರಾಜೆಕ್ಟ್ಎಕ್ಸ್‌ಪೋ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಎಸ್ ಗೋಗಟೆ ಇನ್‌ಸ್ಟಿಟ್ಯೂಟ್  ಆಫ್ ಟೆಕ್ನಾಲಜಿ ಯಲ್ಲಿ ಅಂತಿಮ ವರ್ಷದ  ಪದವಿ ವಿದ್ಯಾರ್ಥಿಗಳು  ಅಭಿವೃದ್ಧಿಪಡಿಸಿದ  ಪ್ರಾಜೆಕ್ಟ್‌ ಪ್ರದರ್ಶನ “ಪ್ರಾಜೆಕ್ಟ್ ಎಕ್ಸ್‌ಪೋ-2024” ರಲ್ಲಿ 250ಕ್ಕೂ ಹೆಚ್ಚು ಅತ್ಯಾಧುನಿಕ  ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಲಾಯಿತು.

ಬೆಳಗಾವಿಯ ಎಕೆಪಿ ಫೆರೋಕಾಸ್ಟ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ  ಪರಾಗ್ ಭಂಡಾರೆ ಅವರು  ಈ ಮೆಗಾ ಪ್ರಾಜೆಕ್ಟ್ ಎಕ್ಸ್‌ಪೋವನ್ನು  ಉದ್ಘಾಟಿಸಿ, ಮಾತನಾಡುತ್ತ, ಮುಂಬರುವ ದಶಕದಲ್ಲಿ ಕೃತಕ  ಬುದ್ಧಿಮತ್ತೆಯು ಪ್ರಮುಖ ತಂತ್ರಜ್ಞಾನ ವಾಗಲಿದೆ  ಹಾಗೂ ಕೈಗಾರಿಕಾ  ಕ್ರಾಂತಿಗೆ  ನಾಂದಿ ಹಾಡಲಿದೆ  ಮತ್ತು ವಿದ್ಯಾರ್ಥಿಗಳು ಈ ದಿಸೆಯಲ್ಲಿ ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಿಸಿದರು.

ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್‌ಗಳನ್ನು ಪ್ರಸ್ತುತಪಡಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿವಿಧ ಇಂಜಿನಿಯರಿಂಗ  ಮತ್ತು ಆರ್ಕಿಟೆಕ್ಚರ್‌ ವಿಭಾಗಗಳ 16 ಪ್ರಾಜೆಕ್ಟ್‌ಗಳನ್ನು ವರ್ಷದ ಅತ್ಯುತ್ತಮ  ಪ್ರಾಜೆಕ್ಟ್‌ಗಳಾಗಿ ಆಯ್ಕೆ ಮಾಡಿ ಬಹುಮಾನಗಳೊಂದಿಗೆ  ಪುರಸ್ಕರಿಸಲಾಯಿತು.

500ಕ್ಕೂ ಹೆಚ್ಚು ವಿವಿಧ ಪಿಯು ಮತ್ತು ಡಿಪ್ಲೊಮಾ ಕಾಲೇಜ  ಹಾಗೂ ಹೈ ಸ್ಕೂಲ್ ವಿದ್ಯಾರ್ಥಿಗಳು ಈ ಎಕ್ಸ್‌ಪೋಗೆ ಸಾಕ್ಷಿಯಾದರು. ಕೆಎಲ್‌ಎಸ್ ಜಿಐಟಿಯ ಪ್ರಾಂಶುಪಾಲರಾದ ಡಾ. ಎಂ.ಎಸ್.ಪಾಟೀಲ ಅವರು ಭಾಗವಹಿಸಿದ  ಹಾಗೂ  ವಿಜೇತ ವಿದ್ಯಾರ್ಥಿಗಳನ್ನು  ಅಭಿನಂದಿಸಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button