
ಪ್ರಗತಿವಾಹಿನಿ ಸುದ್ದಿ: ವಕೀಲೆ, ಉದ್ಯಮಿ ಜೀವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಅಧಿಕಾರಿಗಳು ಡಿವೈಎಸ್ ಪಿ ಕನಕಲಕ್ಷ್ಮೀ ಅರವನ್ನು ಬಂಧಿಸಿದ್ದಾರೆ.
ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿರುವ ಎಸ್ ಐಟಿ ಅಧಿಕಾರಿಗಳು ಇಂದು ಡಿವೈ ಎಸ್ ಪಿ ಕನಕಲಕ್ಷ್ಮೀ ಅವರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.
ನವೆಂಬರ್ 22ರಂದು ವಕೀಲೆ ಜೀವಾ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ನನ್ನ ಸಾವಿಗೆ ಡಿವೈ ಎಸ್ ಪಿ ಕನಕಲಕ್ಷ್ಮಿ ಕಾರಣ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದರು. ಸುಮಾರು 13 ಪುಟಗಳ ಡೆತ್ ನೋಟ್ ನಲ್ಲಿ ಡಿವೈಎಸ್ ಪಿ ಕನಕಲಕ್ಷ್ಮೀ ತನಗೆ ವಿಚಾರಣೆಗೆ ಕರೆದು ಕಿರುಕುಳ ನೀಡಿದ್ದಾಗಿ ಹಾಗೂ 25 ಲಕ್ಷ ಬೇಡಿಕೆ ಇಟ್ಟಿದ್ದಾಗಿ ಆರೋಪಿಸಿದ್ದರು. ಇದೀಗ ಪ್ರಕರಣ ಸಂಅಬ್ಂಧ ಎಸ್ ಐಟಿ ಅಧಿಕಾರಿಗಳು ಡಿವೈ ಎಸ್ ಪಿ ಕನಕಲಕ್ಷ್ಮೀ ಅವರನ್ನು ಬಾಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ