ಪ್ರಗತಿವಾಹಿನಿ ಸುದ್ದಿ; ತುಮಕೂರು: ಮಗಳ ಮದುವೆ ಮಾಡಿಕೊಟ್ಟು 15 ದಿನಗಳ ಬಳಿಕ ಎಇಇ ಕುಟುಂಬ ಸಮೇತ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ತುಮಕೂರಿನಲ್ಲಿ ನಡೆದಿದೆ.
ಹೇಮಾವತಿ ನಾಲಾ ವಿಭಾಗದ ಅಸಿಸ್ಟೆಂಟ್ ಎಕ್ಸಿ ಕ್ಯೂಟಿವ್ ಎಂಜಿನಿಯರ್ (ಎಇಇ) ರಮೇಶ್ ಹಾಗೂ ಪತ್ನಿ ಮಮತ ಹಾಗೂ ಮಗಳು ಶುಭಾ ಆತ್ಮಹತ್ಯೆಗೆ ಶರಣಾದವರು.
ತಡರಾತ್ರಿ ಓಮ್ನಿಯಲ್ಲಿ ಆಗಮಿಸಿದ ರಮೇಶ್ ಕುಟುಂಬ ತುಮಕೂರಿನ ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟ್ ಬಳಿ ನಾಲೆಗೆ ಹಾರಿದ್ದಾರೆ. ಎಇಇ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಎಇಇ ರಮೇಶ್ ಗೆ ಇಬ್ಬರು ಹೆಣ್ಣು ಮಕ್ಕಳು. 15 ದಿನಗಳ ಹಿಂದೆ ಮಗಳು ಶುಭಾಳನ್ನು ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಹೋಟೆಲ್ ಉದ್ಯಮಿಗೆ ವಿವಾಹ ಮಾಡಿ ಕೊಟ್ಟಿದ್ದರು. ಆದರೆ ಇದೀಗ ಏಕಾಏಕಿ ಮಗಳನ್ನು ಕರೆದುಕೊಂಡು ಬಂದು ಮಗಳ ಜೊತೆಯೇ ರಮೇಶ್ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ. ಚೋಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುವರ್ಣ ವಿಧಾನಸೌಧದ ವಿದ್ಯುತ್ ಬಿಲ್ ಬಾಕಿ ಎಷ್ಟು? ಕೇಳಿದರೆ ಶಾಕ್ ಆಗ್ತೀರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ