ಪ್ರಗತಿವಾಹಿನಿ ಸುದ್ದಿ, ಬೆೆಳಗಾವಿ – ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮತ್ತು ಏರ್ ಫೋರ್ಸ್ ತಾಂತ್ರಿಕ ಮಹಾವಿದ್ಯಾಲಯ ( ಏರ್ ಫೋರ್ಸ್ ಟೆಕ್ನಿಕಲ್ ಕಾಲೇಜು – ಎ ಎಫ್ ಟಿ ಸಿ) ಯು ಶೈಕ್ಷಣಿಕ ಒಡಂಬಡಿಕೆಗೆ ಸಹಿ ಹಾಕಿವೆ.
ಈ ಒಪ್ಪಂದದ ಪ್ರಕಾರ ಏರ್ ಫೋರ್ಸ್ ನಲ್ಲಿ ನೇಮಕಗೊಂಡು ಸ್ನಾತಕೋತ್ತರ ಶಿಕ್ಷಣವನ್ನು ಮುಂದುವರೆಸಲು ಬಯಸುವ ಅಧಿಕಾರಿಗಳಿಗೆ ಎ. ಎಫ್. ಟಿ. ಸಿ. ವಿ ಟಿ ಯು ಮುಖಾಂತರ ಎಂ.ಟೆಕ್. ಪದವಿಯನ್ನು ನೀಡಬಹುದು. ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಬರುವ ಆರು ವಿಶೇಷ ವಿಷಯಗಳಲ್ಲಿ ಈ ಪದವಿಯನ್ನು ಎ ಐ ಸಿ ಟಿ ಯ ನಿಯಮದಂತೆ ನೀಡಲಾಗುತ್ತದೆ.
ವಿ ತಾ ವಿ ಕುಲಪತಿ ಪ್ರೊ ಕರಿಸಿದ್ದಪ್ಪ ಅವರ ಉಪಸ್ಥಿತಿಯಲ್ಲಿ ಎ ಎಫ್ ಟಿ ಸಿ ಕಮಾಂಡೆಂಟ್ “ಏರ್ ಕೊಮೊಡೋರ್” ಶ್ರೀ ಬಿಜಿ ಫಿಲಿಪ್ ಹಾಗೂ ವಿ ತಾ ವಿ ಕುಲಸಚಿವರಾದ ಪ್ರೊ. ಎ. ಎಸ್. ದೇಶಪಾಂಡೆ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಒಪ್ಪಂದವು ಎರಡೂ ಸಂಸ್ಥೆಗಳ ಕೌಶಲ್ಯ ಮತ್ತು ಸಂಶೋಧನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಕುಲಪತಿ ಪ್ರೊ ಕರಿಸಿದ್ದಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಎ ಎಫ್ ಟಿ ಸಿ ಕಮಾಂಡೆಂಟ್ ಬಿಜಿ ಫಿಲಿಪ್ ಅವರು ಮಾತನಾಡಿ ತಾಂತ್ರಿಕ ಶಿಕ್ಷಣದ ಕ್ಷೇತ್ರದಲ್ಲಿ ವಿ ಟಿ ಯು ಸಾಧಿಸಿದ ಪ್ರಗತಿಯನ್ನು ಕೊಂಡಾಡಿದರು.
ವಿ ತಾ ವಿ ಕುಲಸಚಿವರಾದ ಪ್ರೊ.ಎ.ಎಸ್. ದೇಶಪಾಂಡೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಗ್ರೂಪ್ ಕ್ಯಾಪ್ಟನ್ ಡಾ. ರಾಜು ಹಾಗೂ ಅಧ್ಯಯನ ವಿಭಾಗ ಮುಖ್ಯಸ್ಥರಾದ ಡಾ.ಮಹೇಶ ಎಮ್ಮಿ, ವಿ ತಾ ವಿ ವಿಶೇಷಾಧಿಕಾರಿಗಳಾದ ಪ್ರೊ. ಎಂ ಎಂ ಮುನ್ಷಿ ಹಾಗೂ ಪ್ರೊ ಎಸ್ ಬಿ ಹಾಲಭಾವಿ ಹಾಜರಿದ್ದರು.
ರಾಷ್ಟ್ರೀಯ ಶಿಕ್ಷಣ ನೀತಿ 2020 ಕುರಿತು ಸಿದ್ಧೇಶ್ವರ ಶ್ರೀಗಳ ಜೊತೆ ಚರ್ಚೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ