ಪ್ರಗತಿವಾಹಿನಿ ಸುದ್ದಿ; ಹುಕ್ಕೇರಿ: ವಿಶ್ವ ತಾಯಂದಿರ ದಿನಾಚರಣೆ ಹಿನ್ನೆಲೆಯಲ್ಲಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು 15 ಜನ ತಾಯಂದಿರಿಗೆ ಅಗ್ನಿಹೋತ್ರ ಕಿಟ್ ನೀಡಿ ಅದರ ಮಾಹಿತಿ ತಿಳಿಸಿದರು.
ಇಂದು ವಿಶ್ವ ತಾಯಂದಿರ ದಿನಾಚರಣೆ. ಕೊರೊನಾದಂತಹ ಇಂಥಹ ಸಂದರ್ಭದಲ್ಲಿ ಎಲ್ಲೆಡೆ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಭಯವನ್ನು ಹೋಗಲಾಡಿಸಿ ಧೈರ್ಯ ತುಂಬುವ ಕಾರ್ಯ ತಾಯಂದಿರಿಂದ ಆಗಬೇಕಿದೆ. ಬೆಳಗಾವಿ ಹುಕ್ಕೇರಿ ಹಿರೇಮಠದಿಂದ ರಾಜ್ಯದ ತುಂಬಾ ಅಗ್ನಿಹೋತ್ರ ಮಾಡಲು ಪ್ರೇರೇಪಣೆ ನೀಡಲಾಗಿದೆ ಇಂದು ಹುಕ್ಕೇರಿಯಲ್ಲಿ ಕೂಡ ಪ್ರತಿ ಗಲ್ಲಿಗಲ್ಲಿಯಲ್ಲಿ ಅಗ್ನಿಹೋತ್ರ ನಡೆಯಬೇಕಿದೆ. ಅಂದಾಗ ಮಾತ್ರ ಶಾಂತಿ ಸಮಾಧಾನ ಸಿಗಲು ಸಾಧ್ಯ ಈ ಕೆಲಸಕ್ಕಾಗಿ ತಾಯಿಂದಿರು ಮುಂದೆ ಬಂದಿರುವುದು ಸಂತೋಷದ ಸಂಗತಿ ಎಂದರು.
ಅಗ್ನಿಹೋತ್ರ ಇದು ವೈಜ್ಞಾನಿಕವಾಗಿರುವಂತಹ ಪ್ರಕ್ರಿಯೆ ಇದರಿಂದ ವಾತಾವರಣ ಶುದ್ಧವಾಗುತ್ತದೆ 74 ದೇಶಗಳಲ್ಲಿ ಮಾಡುತ್ತಿರುವ ಅಗ್ನಿಹೋತ್ರವನ್ನು ನಾವು ಕೂಡಾ ಮಾಡಿ ಇವತ್ತು ಇಡೀ ವಿಶ್ವಕ್ಕೆ ವಿಶೇಷವಾದ ಸಂದೇಶವನ್ನು ಸಾರೋಣ. ಆರೋಗ್ಯವನ್ನು ಕಾಪಾಡಿಕೊಳ್ಳಲು ತಾಯಂದಿರುವು ತಮ್ಮ ತಮ್ಮ ಮನೆಯಲ್ಲಿ ಧೈರ್ಯ ತುಂಬಲಿ ಎಂದು ಆಶಿಸಿದರು .
ಉಪನ್ಯಾಸಕಿ ಮಹಾನಂದ ಹಿರೇಮಠ ಮಾತನಾಡಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನಮಗೆ ಗುರುಗಳಾಗಿ ಮಗುಮನಸ್ಸಿನಿಂದ ಪ್ರತಿಯೊಂದು ಧಾರ್ಮಿಕ ಕೆಲಸವನ್ನು ಅಚ್ಚುಕಟ್ಟಾಗಿ ಭೋದಿಸುತ್ತಾರೆ ಅಗ್ನಿಹೋತ್ರದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಹೇಮ್ಮೆಯ ಸಂಗತಿ , ಈ ದೀನ ಆಂಜನೇಯ ನಗರದ ಯೋಗಾಸನ ತಂಡಕ್ಕೆ ಶ್ರೀಗಳು ಅಗ್ನಿಹೋತ್ರ ಮಾಡುವ ವಿಧಾನವನ್ನು ಸರಳವಾಗಿ ತಿಳಿಸಿದ್ದಾರೆ. ಈ ಅಗ್ನಿಹೋತ್ರ ಮಾಡುವುದರಿಂದ ವಾತಾವರಣ ಶುದ್ಧವಾಗುತ್ತದೆ ಎಂದರು.
ವಿದ್ವಾನ್ ಸಂಪತ್ತಕುಮಾರ ಶಾಸ್ತ್ರೀಗಳು ಅಗ್ನಿಹೋತ್ರ ಮಾಹಿತಿಯನ್ನು ನೀಡಿದರು ಇ ಸಂದರ್ಭದಲ್ಲಿ ಉಮಾ ಶ್ರಿಕಾಂತ ಸೊಲ್ಲಾಪುರೆ, ಮಾಲಾ ಬಿಸಿರೊಟ್ಟಿ, ಶರ್ಮಿಳಾ ಬಡಮಲ್ಲನ್ನವರ , ಶ್ರೀ ದೇವಿ ಝೊಂಡ , ಬಡಿಗೇರ ಸರ್ , ಭಾರತಿ ದೇಸಾಯಿ,ಕಲ್ಪನಾ ನಾಗಮೊತಿ, ಶಿವಲಿಲಾ ಜಿರಳಿ,ರೇಖಾ ಪಾಟೀಲ, ಪವನ ಶಾಸ್ತ್ರೀಗಳು ಉಪಸ್ಥಿತರಿದ್ದರು.
ಚಿನ್ನ, ಬೆಳ್ಳಿ ಬೇಡಿಕೆ ಕುಸಿತ; ದರದಲ್ಲಿ ಏರಿಳಿತ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ