ಕೆಎಲ್‌ಇ ಆಯುರ್ವೇದ ಮತ್ತು ಲಂಡನ್ ಕಾಲೇಜ್ ಆಫ್ ಆಯುರ್ವೇದದ ನಡುವೆ ಒಡಂಬಡಿಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ ಎಂ ಕಂಕನವಾಡಿ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಂತರರಾಷ್ಟ್ರೀಯ ಚಟುವಟಿಕೆ ವಿಭಾಗ, 2012 ರಿಂದ ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳ ಸಹಯೋಗದೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
ಇಂದು, ಕೆ.ಎಲ್.ಇ ಜಾಗತಿಕವಾಗಿ ಗುರುತಿಸಲ್ಪಟ್ಟಿದೆ ಮತ್ತು ಕುಲಪತಿ ಡಾ.ಪ್ರಭಾಕರ ಕೋರೆಯವರ ನಾಯಕತ್ವದಲ್ಲಿ ಹೊಸ ಎತ್ತರವನ್ನು ತಲುಪಿದೆ. 2024 ರ ಫೆಬ್ರವರಿ 14 ರಂದು ಲಂಡನ್ ಕಾಲೇಜ್ ಆಫ್ ಆಯುರ್ವೇದಿಕ್ ಮೆಡಿಸಿನ್, ಲಂಡನ್ ಜೊತೆಗೆ ಸಹಯೋಗವನ್ನು ವಿಸ್ತರಿಸಿ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ.
ಎಂಒಯು ವಿನಿಮಯದ ಸಂಜರ್ಭದಲ್ಲಿ ಕೆೆಎಲ್ಇ ಸಂಸ್ಥೆಯ ನಿರ್ದೇಶಕ ವಿ.ಎಸ್.ಸಾಧುನವರ್, ಡಾ. ಪಾಲಿತ ಸೇರಸಿಂಗೆ-ಪ್ರಾಂಶುಪಾಲರು ಮತ್ತು ನಿರ್ದೇಶಕರು, ಲಂಡನ್ ಕಾಲೇಜ್ ಆಫ್ ಆಯುರ್ವೇದಿಕ್ ಮೆಡಿಸಿನ್; ಡಾ. ನಿತಿನ ಗಂಗಾನೆ – ಉಪಕುಲಪತಿ, ಡಾ ಎಂ.ಎಸ್ ಗಣಾಚಾರಿ – ರೆಜಿಸ್ಟ್ರಾರ್ ಕಾ.ಹೆ.ರ್; ಡಾ ಸುಹಾಸ ಕುಮಾರ ಶೆಟ್ಟಿ, ಪ್ರಾಂಶುಪಾಲರು ಮತ್ತು ಡಾ ಸ್ವರ್ಧಾ ಆರ್ ಉಪ್ಪಿನ, ಅಂತರರಾಷ್ಟ್ರೀಯ ಚಟುವಟಿಕೆಯ ಸಂಯೋಜಕರು, ಕಾ.ಹೆ.ರ್ ಶ್ರೀ ಬಿ ಎಂ ಕಂಕನವಾಡಿ ಆಯುರ್ವೇದ ಮಹಾವಿದ್ಯಾಲಯ, ಬೆಳಗಾವಿ ಉಪಸ್ಥಿತರಿದ್ದರು.
ಡಾ. ಸೇರಸಿಂಗೆ ಅವರು ಶ್ರೀಲಂಕಾ, ಜಪಾನ್ ಮತ್ತು ಯುರೋಪ್‌ನಲ್ಲಿ ಆಯುರ್ವೇದದ ಪ್ರೊಫೆಸರ್ ಮತ್ತು ವೈದ್ಯರಾಗಿದ್ದಾರೆ ಮತ್ತು ಸಾಂಪ್ರದಾಯಿಕ ಔಷಧದ ಕಡೆಗೆ ಆರೋಗ್ಯ ವೃತ್ತಿಪರರ ಆಸಕ್ತಿ ಹೆಚ್ಚುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲಂಡನ್‌ನಲ್ಲಿ ಆರೋಗ್ಯ ಸೇವೆ ನೀಡುವವರು ಮತ್ತು ಅನ್ವೇಷಕರಿಗೆ ಆಯುರ್ವೇದ ಸೇವೆಗಳನ್ನು ಸುಗಮಗೊಳಿಸುವ ದೃಷ್ಟಿಯಿಂದ, ಈ ಸಹಯೋಗವನ್ನು ಪ್ರಾರಂಭಿಸಲಾಗಿದೆ. ಯುನೈಟೆಡ್ ಕಿಂಗ್‌ಡಂನಲ್ಲಿ ಆಯುರ್ವೇದ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಮಾರ್ಗಗಳನ್ನು ತೆರೆಯುವುದು, ವಿದ್ಯಾರ್ಥಿ ಮತ್ತು ಶಿಕ್ಷಕರ ವಿನಿಮಯ ಕಾರ್ಯಕ್ರಮಗಳು, ಆರೋಗ್ಯ ಸೌಲಭ್ಯಗಳು ಮತ್ತು ಸಂಶೋಧನೆಗಳನ್ನು ನೀಡುವ ಗುರಿಯನ್ನು ಈ ಎಂಒಯು ಹೊಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ