ಹುತಾತ್ಮ ವಿಂಗ್ ಕಮಾಂಡರ್ ಹನುಮಂತರಾವ್ ಕುಟುಂಬಕ್ಕೆ ಸಾಂತ್ವನ ಹೇಳಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಭಾರತೀಯ ವಾಯುಸೇನೆಯ ಎರಡು ವಿಮಾನಗಳು ಡಿಕ್ಕಿ ಹೊಡೆದು ಪತನಗೊಂಡ ಪ್ರಕರಣದಲ್ಲಿ ಹುತಾತ್ಮರಾಗಿರುವ ಬೆಳಗಾವಿಯ ವಿಂಗ್ ಕಮಾಂಡರ್ ಹನುಮಂತರಾವ್ ಅವರ ನಿವಾಸಕ್ಕೆ ಭೇಟಿ ನೀಡಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಹನುಮಂತರಾವ್ ಕುಟುಂಬದವರಿಗೆ ಸಾಂತ್ವನ ಹೇಳಿದರು.
ವಾಯುಸೇನೆಯ ಸುಖೋಯ್-30 ಹಾಗೂ ಮಿರಾಜ್-2000 ಯುದ್ಧ ವಿಮಾನಗಳು ತಾಲಿಮು ನಡೆಸುತ್ತಿದ್ದ ವೇಳೆ ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡಿವೆ. ಎರಡೂ ವಿಮಾನಗಳು ಮಧ್ಯಪ್ರದೇಶದ ಗ್ವಾಲಿಯರ್ ವಾಯು ನೆಲೆಯಿಂದ ತಾಲೀಮು ನಡೆಸುತ್ತಿದ್ದವು. ಹಾರಾಟ ನಡೆಸುತ್ತಿದ್ದ ವೇಳೆ ಆಗಸದಲ್ಲಿ ಡಿಕ್ಕಿಹೊಡೆದ ವಿಮಾನಗಳು ಮೊರೆನಾ ಬಳಿ ಪತನಗೊಂಡಿವೆ. ದುರಂತದಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹನುಮಂತರಾವ್ ಹುತಾತ್ಮರಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಹುತಾತ್ಮ ಯೋಧ ಹನುಮಂತರಾವ್ ಅವರ ಬೆಳಗಾವಿಯ ಗಣೇಶಪುರದಲ್ಲಿರುವ ನಿವಾಸಕ್ಕೆ ಧಾವಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಹನುಮಂತರಾವ್ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ವಿಮಾನ ದುರಂತದಲ್ಲಿ ಮಡಿದ ಯೋಧನಿಗೆ ಸಂತಾಪ ಸೂಚಿಸಿದರು.
*ಭಾರತೀಯ ಸೇನೆಯ ಎರಡು ವಿಮಾನ ಅಪಘಾತ ಪ್ರಕರಣ; ಬೆಳಗಾವಿಯ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಹುತಾತ್ಮ*
https://pragati.taskdun.com/iaf-planecrashmadhyapradeshbelagavi-yodha-death/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ