![](https://pragativahini.com/wp-content/uploads/2025/02/jirale.jpg)
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನ ಯಲಹಂಕ ವಾಯುನೆಲೆಅಲ್ಲಿ ನಾಳೆಯಿಂದ ಏರ್ ಶೋ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ರಿಹರ್ಸಲ್ ನಡೆಸಲಾಗಿದ್ದು, ಈ ವೇಳೆ ಪೊಲೀಸರಿಗೆ ನೀಡಿದ್ದ ಊಟದಲ್ಲಿ ಜಿರಳೆ ಪತ್ತೆಯಾಗಿದೆ.
ಏರ್ ಶೋಗೆ ಬಂದಿದ್ದ ಪೊಲೀಸರಿಗೆ ಯಲಹಂಕ ಠಾಣೆಯ ಇನ್ಸ್ ಪೆಕ್ಟರ್ ಕೃಷ್ಣಮೂರ್ತಿ ಊಟದ ವ್ಯವಸ್ಥೆ ಮಾಡಿಸಿದ್ದರು. ಯಲಹಂಕ ಠಾಣೆಯಿಂದ ಊಟ ನೀಡಲಾಗಿತ್ತು. ಆದರೆ ಪೊಲೀಸರಿಗೆ ನೀಡಿದ್ದ ಊಟದಲ್ಲಿ ಜಿರಳೆ ಪತ್ತೆಯಾಗಿದ್ದು, ಹಲವು ಪೊಲೀಸರು ಊಟ ಮಾಡದೇ ಪರದಾಡಿದ್ದಾರೆ.
ಭದ್ರತೆಗೆ ಬರುವ ಪೊಲೀಸರಿಗೆ ಒಂದು ಊಟಕ್ಕೆ 200 ರೂ ನೀಡುವುದಾಗಿ ಕೆಲ ದಿನಗಳ ಹಿಂದಷ್ಟೇ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದರು. ಆದೇಶ ಪ್ರಕಟವಾಗಿ ವಾರವೂ ಕಳೆದಿಲ್ಲ ಆಗಲೇ ಗುಣಮಟ್ಟ, ಸ್ವಚ್ಛತೆ ಇಲ್ಲದ ಊಟ ಪೂರೈಕೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ