Karnataka News

*ಏರೋ ಇಂಡಿಯಾ ಏರ್ ಶೋ ಹಿನ್ನೆಲೆ: ವಿಮಾನಗಳ ಹಾರಾಟ ಬಂದ್*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ-2025 ಏರ್ ಶೋ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಲಿದೆ.

ಏರ್ ಶೋ ನಡೆಯುವ ಸಂದರ್ಭದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚಾರಣೆ ಸ್ಥತಗೊಳ್ಳಲಿದೆ. ಏರ್ ಪೋರ್ಟ್ ನ ವಿಮಾನ ಟೇಕ್ ಆಫ್, ಲ್ಯಾಂಡಿಗ್ ನಲ್ಲಿ ವ್ಯತ್ಯಾಸವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಏರ್ ಲೈನ್ಸ್ ಸಿಬ್ಬಂದಿಗಳ ಮಾಹಿತಿ ಪಡೆದು ಬರುವಂತೆ ಕೋರಲಾಗಿದೆ.

ಫೆಬ್ರವರಿ 5ರಿಂದ 8ರವರೆಗೆ ಬೆಳಿಗ್ಗೆ 9 ಗಂಟೆಯಿಂದ 12 ಗಂಟೆಯವರೆಗೆ ಮತ್ತು ಮಧ್ಯಾಹ್ನ 2ರಿಂದ ಸಂಜೆ 5 ಗಂಎಯವರೆಗೆ ವಿಮಾನ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಫೆ9 ರಂದು ಬೆಳಿಗ್ಗೆ 9ರಿಂದ 12 ಗಂಟೆಯವರೆಗೆ ವಿಮಾನ ಹಾರಾಟ ಸ್ಥಬ್ದವಾಗಲಿದೆ. ಫೆ.10ರಂದು ಬೆಳಿಗ್ಗೆ 9ಗಂಟೆಯಿಂದ 12 ಮತ್ತು ಮಧ್ಯಾಹ್ನ 2ರಿಂದ ಸಂಜೆ 4ಗಂಟೆ ವರೆಗೂ ವಿಮಾನ ಕಾರ್ಯಾಚರಣೆ ಇರುವುದಿಲ್ಲ. ಫೆ.11 ಮತ್ತು 12 ರಂದು 12 ಗಂಟೆಯಿಂದ 3 ಗಂಟೆಯವರೆಗೂ ವಿಮನಗಳ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.

ಫೆ13 ಮತ್ತು 14ರಂದು ಬೆಳಿಗ್ಗೆ 9ರಿಂದ 12ಗಂಟೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5ಗಂಟೆಯವರೆಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆ ಇರುವುದಿಲ್ಲ.

Home add -Advt

ಯಲಹಂಕದ ವಾಯುನೆಲೆಯಲ್ಲಿ ಫೆ.10ರಿಂದ 14ರವರೆಗೆ ಏಷ್ಯಾದ ಅತಿದೊಡ್ಡ ಏರ್ ಶೋ ನಡೆಯಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button