ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರದಿಂದಲೇ ಏರ್ ಲೈನ್ಸ್ ಮಾಡುವ ಚಿಂತನೆ ನಡೆದಿದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಕರ್ನಾಟಕದ ವಿಮಾನ ನಿಲ್ದಾಣಗಳನ್ನು ಈ ಹಿಂದೆ ಏರ್ ಪೋರ್ಟ್ ಅಥಾಅರಿಟಿಗೆ ನೀಡಿದ್ದೆವು. . ವಿಮಾನ ನಿಲ್ದಾಣದ ಭೂಮಿ ಕೂಡ ಏರ್ ಪೋರ್ಟ್ ಅಥಾರಿಟಿ ಹೆಸರಿಗೆ ವರ್ಗಾವಣೆಯಾಗಿತ್ತು. ಇದರಿಂದ ವಿಮನಗಳ ಮೇಲೆ ನಮ್ಮ ಹಿಡಿತವಿರುತ್ತಿರಲಿಲ್ಲ. ಈಗ ಹಾಗಿಲ್ಲ. ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರವೇ ನಿರ್ವಹಣೆ ಮಾಡಲಿದೆ ಎಂದು ಹೇಳಿದರು.
ಸರ್ಕಾರದಿಂದಲೇ ಏರ್ ಲೈನ್ಸ್ ಮಾಡುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ. ವಿಜಯಪುರ, ಕಾರವಾರ, ಬೀದರ್ ಸೇರಿದಂತೆ ಮುಂದೆ ಎಲ್ಲಾ ವಿಮಾನ ನಿಲ್ದಾಣಗಳನ್ನು ನಾವೇ ನಿರ್ವಹಣೆ ಮಾಡುತ್ತೇವೆ ಎಂದರು.
ಇನ್ನು ಉತ್ತರ ಕನ್ನಡ ಜಿಲೆಯ ತದಡಿ ಸೂಕ್ಷ್ಮ ವಲಯ ಆಗಿದ್ದರಿಂದ ಬಂದರು ನಿರ್ಮಾಣ ಆಗಿಲ್ಲ. ಇದೀಗ ತದಡಿಯಲ್ಲಿ ಶೀಘ್ರದಲ್ಲಿಯೇ ಇಕೋ ಟೂರಿಸಂ ಪಾರ್ಕ್ ಮಾಡಲು ನಿರ್ಧರಿಸಿದ್ದೇವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ