ಪ್ರಗತಿವಾಹಿನಿ ಸುದ್ದಿ, ಸವದತ್ತಿ: ರಾಜ್ಯದಲ್ಲಿ ರಮೇಶ ಜಾರಕಿಹೊಳಿಯವರ ಪ್ರಯತ್ನದಿಂದ ಬಿಜೆಪಿ ಸರಕಾರದ ರಚನೆಯಾಗಿರುವದನ್ನು ಅಲ್ಲಗಳೆಯುವಂತಿಲ್ಲ ಎಂದು ಬೃಹತ್ ಮತ್ತು ಮದ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಹೇಳಿದರು.
ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಲ್ಲಿ ಸವದತ್ತಿ, ರಾಮದುರ್ಗ, ಗೋಕಾಕ, ಅರಭಾಂವಿ ಕ್ಷೇತ್ರಗಳ ಬೆಳಗಾವಿ ಗ್ರಾಮೀಣ ಜಿಲ್ಲಾ ಗ್ರಾಮ ಸ್ವರಾಜ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಕ್ಷವನ್ನು ಕಟ್ಟುವ ಕೆಲಸ ಕಾರ್ಯಕರ್ತರದ್ದಾದರೆ, ಕಾರ್ಯಕರ್ತರನ್ನು ಜನಪ್ರತಿನಿಧಿಯನ್ನಾಗಿಸುವ ಕಾರ್ಯ ಬಿಜೆಪಿ ನಾಯಕರದ್ದಾಗಿದೆ ಎಂದರು. ಬರುವಂತ ಚುನಾವಣೆಯಲ್ಲಿ ನಮ್ಮ ನಮ್ಮಲ್ಲಿ ಒಳ ಜಗಳಗಳನ್ನು ಮಾಡದೆ ಒಗ್ಗಟ್ಟಿನಿಂದ ಗೆಲ್ಲುವ ಅಭ್ಯರ್ಥಿಯನ್ನು ಸೂಚಿಸಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪರ ಅಭ್ಯರ್ಥಿಗಳು ಗೆಲ್ಲಲು ಪ್ರಯತ್ನಿಸಬೇಕೆಂದರು. ಎಂದರು.
ಉತ್ತರ ಕರ್ನಾಟಕವು ಅಭಿವೃದ್ದಿಯನ್ನು ಕಾಣುತ್ತಿದೆ ಎಂದರೆ ಅದು ಬಿಜೆಪಿ ಸರಕಾರದಲ್ಲಿ ಮಾತ್ರ ಎಂಬುದನ್ನು ಗಮನಹರಿಸಬೇಕಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರದಲ್ಲಿ ಇನ್ನೂ ೨೦ ವರ್ಷ ಬಿಜೆಪಿ ಪಕ್ಷವು ತನ್ನ ಆಡಳಿತವನ್ನು ಗಟ್ಟಿಯಾಗಿ ಭದ್ರಪಡಿಸಿಕೊಂಡಿದ್ದು, ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಿಗೆ ಪ್ರಮುಖ ಸ್ಥಾನವನ್ನು ಒದಗಿಸುವ ಕಾರ್ಯ ಬಿಜೆಪಿ ಪಕ್ಷದಲ್ಲಿದೆ ಎಂದರು.
ಶಿಸ್ತಿನ ಪಕ್ಷವಾಗಿರುವ ಬಿಜೆಪಿಯಲ್ಲಿ ಜಾತಿ, ಸಂಬಂಧ ಹಾಗೂ ವಂಶ ಪಾರಂಪರೆಗೆ ಅವಕಾಶವಿಲ್ಲದಾಗಿದ್ದು, ಕಾರ್ಯಕರ್ತರಿಗೆ ಇಲ್ಲಿ ಉತ್ತಮ ಗೌರವವಿದೆ ಎಂದರು. ಬರುವಂತ ಗ್ರಾಂ.ಪಂ ಚುನಾವಣೆಯಲ್ಲಿ ಒಗ್ಗಟ್ಟಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವಂತ ಪ್ರಯತ್ನವನ್ನು ಮಾಡಬೇಕೆಂದರು.
ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.೫೦ರಷ್ಟು ಮೀಸಲಾತಿ ನೀಡಲಾಗಿದ್ದು, ಅವರಿಗೆ ಸಿಕ್ಕಿರುವಂತ ಸ್ವಾತಂತ್ರ್ಯಕ್ಕೆ ಬೆಂಬಲವಾಗಿ ಮಹಿಳೆಯರು ಸಭೆ ಸಮಾರಂಭದಲ್ಲಿ ಭಾಗವಹಿಸುವಂತ ಅವಕಾಶ ಕಲ್ಪಿಸಬೇಕೆಂದರು.
ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮಾತನಾಡಿ, ರಾಜ್ಯದಲ್ಲಿ ೨೦೨೩ರವರೆಗೆ ಬಿ.ಎಸ್.ಯಡಿಯೂರಪ್ಪನವರೆ ಮುಖ್ಯಮಂತ್ರಿಗಳಾಗಿ ಮುಂದುವರೆಯಲಿದ್ದು, ಅದರಲ್ಲಿ ಸಂಶಯದ ಮಾತಿಲ್ಲ ಎಂದರು.
ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದಲ್ಲಿ ಬರುವ ೨೮ ಗ್ರಾಂ.ಪಂಗಳಲ್ಲಿ ಎಲ್ಲ ಗ್ರಾಂ.ಪಂ ಗಳು ಬಿಜೆಪಿ ವಶವಾಗುವುದು ಶತ ಸಿದ್ದ ಎಂದರು.
ವಿ.ಪ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಶಶಿಕಾಂತ ನಾಯಕ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿದರು.
ಸಂಸದ ಅಣ್ಣಸಾಹೇಬ ಜೊಲ್ಲೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಪ್ರೇಮಾ ಭಂಡಾರಿ, ಸುಭಾಸ ಪಾಟೀಲ, ಭೀಮಸಿ ಭರಮಣ್ಣವರ, ರಾಜು ಚಿಕ್ಕನಗೌಡರ, ರಾಜೇಶ ಬೀಳಗಿ, ರಾಜೇಂದ್ರ ಗೌಡಪ್ಪಗೋಳ, ಮಹಾದೇವ ಶೆಕ್ಕೆ ಉಪಸ್ಥಿತರಿದ್ದರು.
ಸವದತ್ತಿ ಘಟಕದ ಬಿಜೆಪಿ ಅಧ್ಯಕ್ಷ ಈರಣ್ಣ ಚಂದರಗಿ ಸ್ವಾಗತಿಸಿದರು. ರಾಜು ಚಿಕ್ಕನಗೌಡರ ನಿರೂಪಿಸಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ