------WebKitFormBoundLS����
Belagavi NewsBelgaum NewsKannada NewsKarnataka NewsPolitics

ಪ್ರವಾಹ ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ: ಶಾಸಕ ಡಿ ಎಂ ಐಹೊಳೆ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜನರು ಯಾವುದೇ ಕಾರಣಕ್ಕೂ ನದಿ ತೀರಕ್ಕೆ ತೆರಳಬಾರದು, ನದಿ ತೀರದ ಜನ ಧೈರ್ಯವಾಗಿರಬೇಕು, ಪ್ರವಾಹ ಪರಿಸ್ಥಿತಿ ಎದುರಿಸಲು ತಾಲ್ಲೂಕಾಡಳಿತ  ಸಿದ್ಧತೆ ಮಾಡಿಕೊಂಡಿದೆ. ನನ್ನ ಮತಕ್ಷೇತ್ರದ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಡಿ ಎಂ ಐಹೊಳೆ ನದಿ ಪಾತ್ರದ ಜನರಿಗೆ ಧೈರ್ಯ ತುಂಬಿದ್ದಾರೆ.

ಅವರು ರವಿವಾರ ರಾಯಬಾಗ ತಾಲ್ಲೂಕಿನ ಕೃಷ್ಣಾ ನದಿ ತೀರದ ಬಾವನ ಸೌಂದತ್ತಿ ಗ್ರಾಮದ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಸುರೇಶ ಮುಂಜೆ, ಚಿದಾನಂದ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ತಾತ್ಯಾಸಾಬ ಕಾಟೆ, ಗ್ರಾ.ಪಂ.ಅಧ್ಯಕ್ಷ ರಾಮಚಂದ್ರ ಕಾಟೆ, ಧೂಳಗೌಡ ಪಾಟೀಲ,ಮಹಾವೀರ ಪಾಟೀಲ, ತಾ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಅರುಣ ಮಾಚಕನೂರ, ಡಾ. ಎಂ.ಬಿ. ಪಾಟೀಲ, ವಿನೋದ ಮಾವರಕರ ಸೇರಿದಂತೆ ಇತರರು ಇದ್ದರು.

ಕೃಷ್ಣಾ ನದಿ ನೀರಿನ ಪ್ರವಾಹದಿಂದ 200 ಹೆಕ್ಟೇರ  ಬೆಳೆ ನಾಶವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button