ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: “ಗಣರಾಜ್ಯೋತ್ಸವ ಈ ದಿನ ಪ್ರತಿಯೊಬ್ಬ ನಾಗರಿಕರು ಸಂವಿಧಾನಬದ್ಧವಾಗಿ ನಡೆಯುವ ಮೂಲಕ ತಮ್ಮನ್ನು ತಾವು ಸಂವಿಧಾನಕ್ಕೆ ಸಮರ್ಪಣೆ ಮಾಡಿಕೊಂಡು ದೇಶದ ಸಮಗ್ರ ಅಭಿವೃದ್ಧಿ ಪ್ರಗತಿಗೆ ಸಂಕಲ್ಪಿಸಬೇಕು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ನ್ಯಾಷನಲ್ ಮಿಲಿಟರಿ ವಾರ್ ಮೆಮೋರಿಯಲ್ ಬಳಿ ಗಣರಾಜ್ಯೋತ್ಸವ ನಿಮಿತ್ತ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಭಾರತದ ಭವ್ಯ ಪರಂಪರೆ ಜಗತ್ತಿನಲ್ಲಿ ತನ್ನದೇ ಆದ ವಿಭಿನ್ನತೆ ಮೆರೆದಿದೆ. ಪ್ರಗತಿ ಹೊಂದಿದ ಆಧುನಿಕ ಭಾರತ ಮಾನವೀಯತೆಯ ಜತೆ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್’ ಎಂಬ ಧ್ಯೇಯವಾಕ್ಯದೊಂದಿಗೆ ಮುನ್ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಅವರು ರಾಜ್ಯದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದರು.
ಪದ್ಮಪ್ರಶಸ್ತಿ ಹೆಮ್ಮೆಮೂಡಿಸಿದೆ:
ಎಸ್.ಎಂ.ಕೃಷ್ಣ ಅವರಿಗೆ ಪದ್ಮವಿಭೂಷಣ, ಸುಧಾಮೂರ್ತಿ, ಎಸ್.ಎಲ್.ಭೈರಪ್ಪ ಸೇರಿದಂತೆ ಕರ್ನಾಟಕ ರಾಜ್ಯದ ಒಟ್ಟು ಎಂಟು ಜನರಿಗೆ ಪದ್ಮಪ್ರಶಸ್ತಿಗಳು ಘೋಷಣೆಯಾಗಿರುವುದು ಹೆಮ್ಮೆ ತಂದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಫಲಾಪೇಕ್ಷೆಗಳಿಲ್ಲದೆ ತಮ್ಮ ವೃತ್ತಿಯಲ್ಲಿ ನಿರತರಾಗಿ ಎಲೆಮರೆಯ ಕಾಯಿಯಂತೆ ದುಡಿದ ನೈಜ ಸಾಧಕರನ್ನು ಗುರುತಿಸಿ ಪದ್ಮಪ್ರಶಸ್ತಿಗಳನ್ನು ನೀಡುವ ಪದ್ಧತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೊಳಿಸಿದ್ದಾರೆ. ಕರ್ನಾಟಕ ಈ ಬಾರಿ 8 ಪ್ರಶಸ್ತಿಗಳನ್ನು ಪಡೆಯುವ ಮೂಲಕ ಇಲ್ಲಿನ ಮಾನವ ಸಂಪನ್ಮೂಲದ ವಿಪುಲತೆಯ ಪ್ರದರ್ಶನವಾಗಿದೆ ಎಂದು ಅವರು ಹೇಳಿದರು.
ಬೆಳಗಾವಿಯಲ್ಲಿ ರೈತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ
https://pragati.taskdun.com/raitha-morcha-national-executive-meeting-in-belagavi/
ರೇಡ್ಗೆ ಹೋದ ಅಧಿಕಾರಿಯದ್ದೇ ಒಂದು ಸಿಡಿ ಸಿಕ್ಕಿದೆ – ರಮೇಶ ಜಾರಕಿಹೊಳಿ ಬಾಂಬ್
https://pragati.taskdun.com/a-cd-of-the-officer-who-went-to-the-raid-was-found-ramesh-jarakiholi-bomb/
106 ಜನರಿಗೆ ಪದ್ಮ ಪ್ರಶಸ್ತಿ ಪ್ರಕಟ : ರಾಜ್ಯದ 8 ಸಾಧಕರಿಗೆ ಪ್ರಶಸ್ತಿ
https://pragati.taskdun.com/padma-award-announced-to-106-people-award-to-8-achievers-of-the-state/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ