
ಪ್ರಗತಿವಾಹಿನಿ ಸುದ್ದಿ: ಆರ್ ಎಸ್ ಎಸ್ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಪಥಸಂಚಲನ ನಡೆಯುತ್ತಿದೆ. ಅದರಂತೆ (ಅಕ್ಟೋಬರ್ 18) ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲೂ ಆರ್.ಎಸ್.ಎಸ್ ಪಂಥಸಂಚಲನ ನಡೆದಿದ್ದು, ಈ ವೇಳೆ ಅಲ್ಲಾಹು ಅಕ್ಬರ್ ಘೋಷಣೆ ಮೊಳಗಿದೆ.
ಶ್ರೀನಿವಾಸಪುರದ ಬಾಲಕಿಯರ ಕಾಲೇಜಿನಿಂದ ಆರಂಭವಾದ ಪಥಸಂಚಲನ ಟಿಪ್ಪು ಸರ್ಕಲ್ ಗೆ ಬರುತ್ತಿದ್ದಂತೆಯೇ ಕೆಲ ಅನ್ಯಕೋಮಿನ ಜನ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದಾರೆ.
ಅಲ್ಲದೇ ಆಝಾನ್ ಕೂಗುವ ವೇಳೆಯಲ್ಲಿ ಪಥ ಸಂಚಲನ ನಡೆಸಲಾಗಿದೆ ಎಂದು ಅನ್ಯಕೋಮಿನ ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಕೂಡಲೇ ಎಚ್ಚೆತ್ತ ಪೊಲೀಸರು ಅನ್ಯಕೋಮಿನ ಜನರ ಗುಂಪನ್ನು ತಡೆದರು. ಬಳಿಕ ಪಥ ಸಂಚಲನ ಶಾಂತಿಯುತವಾಗಿ ಮುಕ್ತಾಯಗೊಂಡಿತು.