ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಸೋಂಕಿತರು ಚಿಕಿತ್ಸೆ, ಬೆಡ್, ಆಕ್ಸಿಜನ್ ಗಾಗಿ ಪರದಾಡುತ್ತಿದ್ದರೆ ಮತ್ತೊಂದೆಡೆ ರೋಗಿಗಳನ್ನು ಸಾಗಿಸಲು ಆಂಬುಲೆನ್ಸ್ ಚಾಲಕರು ಸುಲಿಗೆಗಿಳಿದಿರುವ ಪ್ರಕರಣಗಳು ಹೆಚ್ಚುತ್ತಿವೆ. ಇಲ್ಲೋರ್ವ ಆಂಬುಲೆನ್ಸ್ ಚಾಲಕ ಕೋವಿಡ್ ರೋಗಿಯನ್ನು ಸಾಗಿಸಲು ಬರೋಬ್ಬರಿ 1.20 ಲಕ್ಷ ರೂ ಹಣ ಪಡೆದ ಘಟನೆ ಬೆಳಕಿಗೆ ಬಂದಿದೆ.
ಗುರುಗ್ರಾಮದ ಅಮನ್ ದೀಪ್ ಕೌರ್ ಅವರ ತಾಯಿ ಸತೀಂದರ್ ಕೌರ್ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲು ಗುರುಗ್ರಾಮದಿಂದ ಲುಧಿಯಾನಕ್ಕೆ ಕರೆದೊಯ್ಯಬೇಕಿತ್ತು. ಹೀಗಾಗಿ ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆಂಬುಎನ್ಸ್ ಚಾಲಕ ಗುರುಗ್ರಾಮದಿಂದ ಲುಧಿಯಾನ ಆಸ್ಪತ್ರೆಗೆ 350 ಕೀ.ಮಿಗೆ 1.20 ಲಕ್ಷ ರೂ ಕೇಳಿದ್ದಾನೆ. ಬೇರೆ ದಾರಿಯಿಲ್ಲದೇ ಅಮನ್ ದೀಪ್ 1.20 ಲಕ್ಷ ರೂ ಹಣ ಪಾವತಿಸಿದ್ದಾರೆ.
ಅಂಬುಲೆನ್ಸ್ ಚಾಲಕ ಓರ್ವ ಎಂಬಿಬಿಎಸ್ ವೈದ್ಯ ಕೂಡ ಆಗಿದ್ದ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ. ಲುಧಿಯಾನದ ದುಗ್ರಿಯ ಆಸ್ಪತ್ರೆಗೆ ತಾಯಿಯನ್ನು ದಾಖಲಿಸಿದ ಅಮನ್ ದೀಪ್ ಆಂಬುಲೆನ್ಸ್ ಗೆ ಪಾವತಿಸಿದ ಬಿಲ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಘಟನೆ ಗಮನಿಸಿದ ದೆಹಲಿ ಪೊಲೀಸರು ಪ್ರಕರಾ ದಾಖಲಿಸಿಕೊಂಡು ಆಂಬುಲೆನ್ಸ್ ಚಾಲಕನನ್ನು ಬಂಧಿಸಿದ್ದಾರೆ.
ಆಂಬುಲೆನ್ಸ್ ಬಿಲ್ ಟ್ವಿಟರ್ ನಲ್ಲಿ ಶೇರ್ ಮಾಡಿರುವ ಐಪಿಎಸ್ ಅಧಿಕಾರಿ ಪಂಕಜ್ ನೈನ್, ನಿಮಗೆ ನಾಚಿಕೆಯಾಗಬೇಕು, ದೇವರ ಬಗ್ಗೆಯಾದರೂ ಸ್ವಲ್ಪ ಭಯ ಎಂಬುದು ಇರಲಿ ಎಂದು ಕಿಡಿಕಾರಿದ್ದಾರೆ.
ಅನಗತ್ಯವಾಗಿ ರಸ್ತೆಗಿಳಿದರೆ ಹುಷಾರ್…!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ