CrimeKannada NewsKarnataka NewsNational
*ಡಿಕ್ಕಿ ಹೊಡೆದು 50 ಮೀಟರ್ ಬೈಕ್ ಎಳೆದೊಯ್ದ ಆ್ಯಂಬುಲೆನ್ಸ್: ದಂಪತಿ ಸಾವು*

ಪ್ರಗತಿವಾಹಿನಿ ಸುದ್ದಿ: ಆ್ಯಂಬುಲೆನ್ಸ್ ಚಾಲಕ ಮಾಡಿದ ಅವಘಡಕ್ಕೆ ದಂಪತಿ ಸಾವನ್ನಪ್ಪಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದ ಬಳಿ ನಡೆದಿದೆ.
ವೇಗವಾಗಿ ಬಂದ ಆ್ಯಂಬುಲೆನ್ಸ್ 2 ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ದುರ್ದೈವಿಗಳನ್ನು ಬೈಕ್‌ನಲ್ಲಿದ್ದ ಇಸ್ಮಾಯಿಲ್(40) ಮತ್ತು ಸಮೀನ ಬಾನು ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೆಡ್ ಸಿಗ್ನಲ್ ಇದ್ದ ಕಾರಣ ನಿಂತಿದ್ದ ಬೈಕ್ ಸವಾರರಿಗೆ ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಕಡೆಯಿಂದ ವೇಗವಾಗಿ ಬಂದ ಆಂಬ್ಯುಲೆನ್ಸ್ ಡಿಕ್ಕಿ ಹೊಡೆದಿದೆ.
50 ಮೀಟರ್ ದೂರ ಬೈಕ್‌ಗಳನ್ನು ಆಂಬ್ಯುಲೆನ್ಸ್ ಎಳೆದೊಯ್ದಿದ್ದು, ಬಳಿಕ ಪೊಲೀಸ್ ಚೌಕಿಗೆ ಗುದ್ದಿದೆ. ಅಪಘಾತ ಬಳಿಕ ಸ್ಥಳದಿಂದ ಆಂಬ್ಯುಲೆನ್ಸ್ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




