
ಪ್ರಗತಿವಾಹಿನಿ ಸುದ್ದಿ: 173 ಪ್ರಯಾಣಿಕರಿದ್ದ ಅಂತರಾಷ್ಟ್ರೀಯ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನ ಟೇಕಾಫ್ ಆಗುವ ಕೆಲ ಸೆಕೆಂಡುಗಳಲ್ಲಿ ಈ ಘಟನೆ ನಡೆದಿದೆ.
ಅಮೆರಿಕ ಏರ್ ಲೈನ್ಸ್ ಬೋಯಿಂಗ್ 737 MAX 8 ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನವನ್ನು ಡೆನ್ವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದೆ.
ವಿಮಾನ ಡೆನ್ವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೆಕಾಫ್ ಆಗುವ ಕೆಲ ಸೆಕೆಂಡುಗಳಲ್ಲಿ ಲ್ಯಾಂಡಿಂಗ್ ಗೇರ್ ನಲ್ಲಿ ಸಮಸ್ಯೆಯಾಗಿ ರನ್ ವೇಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಅಧಿಕಾರಿಗಳು ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸ್ಥಳಾಂತರಿಸಿದ್ದಾರೆ.
ವಿಮಾನದಲ್ಲಿ ಹೊಗೆ, ಬೆಂಕಿಯಿಂದಾಗಿ ಪ್ರಯಾಣಿಕರನ್ನು ತುರ್ತು ನಿರ್ಗಮನದ ಬಾಗಿಲಿನಿಂದ ಕೆಳಗಿಳಿಸಲಾಗಿದೆ. ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ವರದಿಯಾಗಿದೆ.