ಪ್ರಗತಿವಾಹಿನಿ ಸುದ್ದಿ, ಮುಂಬೈ: ಅಮೀರ್ ಖಾನ್ ಪ್ರೊಡಕ್ಷನ್ಸ್ ಜೈನ ಸಮುದಾಯದ ಹಬ್ಬದ ಸಂದರ್ಭದಲ್ಲಿ ಕ್ಷಮೆ ಯಾಚಿಸುವ ವೀಡಿಯೊವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಅದನ್ನು ಅಳಿಸಿಹಾಕಿದೆ
ಗುರುವಾರ ಜೈನರ ಸಂವತ್ಸರಿ ಹಬ್ಬವಿತ್ತು. ಈ ಸಂದರ್ಭದಲ್ಲಿ ವೀಡಿಯೊ ಒಂದನ್ನು ಪೋಸ್ಟ್ ಮಾಡಿತ್ತು. ಅದರಲ್ಲಿ ‘ಮಿಚ್ಚಾಮಿ ದುಕ್ಕಡಮ್’ ಎಂಬ ಪದಗುಚ್ಛದೊಂದಿಗೆ ಪ್ರಾರಂಭವಾದ ವೀಡಿಯೊದಲ್ಲಿ “ಹಮ್ ಸಬ್ ಇನ್ಸಾನೆ ಹೈ…ಔರ್ ಗಲ್ತಿಯಾಂ ಹಮ್ಸೆ…ಹೋತಿ ಹೈ” ( ನಾವೆಲ್ಲ ಮನುಷ್ಯರು.. ತಪ್ಪುಗಳು ನಮ್ಮಿಂದ ಆಗುತ್ತವೆ..) ಎಂದು ಹಿಂದಿ ಹಿನ್ನೆಲೆ ಧ್ವನಿಯನ್ನು ಈ ವಿಡಿಯೊ ಹೊಂದಿತ್ತು. “ನಿಮ್ಮ ಭಾವನೆಗಳಿಗೆ ಶಾಶ್ವತ ಧಕ್ಕೆಯಾಗಿದ್ದಲ್ಲಿ ನಾನು ಕ್ಷಮೆ ಕೇಳುತ್ತೇನೆ” ಎಂದು ಸಹ ಅದರಲ್ಲಿ ಹೇಳಲಾಗಿತ್ತು.
ಆದರೆ ಈ ವಿಡಿಯೊವನ್ನು ಅಮೀರ್ ಖಾನ್ ಪ್ರೊಡಕ್ಷನ್ಸ್ ಈಗ ಅಳಿಸಿ ಹಾಕಿದೆ. ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮುರುಘಾಶ್ರೀಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ; ಬೆಂಗಳೂರಿಗೆ ಶಿಫ್ಟ್ ಸಾಧ್ಯತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ