Latest

*ದೇವಸ್ಥಾನದಲ್ಲಿ ಮಹಿಳೆಗೆ ಥಳಿತ; ಧರ್ಮದರ್ಶಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇವಸ್ಥಾನದಲ್ಲಿ ಮಹಿಳೆ ಮೇಲೆ ಧರ್ಮದರ್ಶಿಯಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮುನಿಕೃಷ್ಣ ಅವರನ್ನು ಬೆಂಗಳೂರಿನ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಮೃತಹಳ್ಳಿಯ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಡಿ.21 ರಂದು ಪೂಜೆಗೆ ಹೋಗಿದ್ದ ಹೇಮಾವತಿ ಎಂಬ ಮಹಿಳೆಯ ಮೇಲೆ ಮುನಿಕೃಷ್ಣ ಎಂಬುವವರು ದೇವರೆದುರೇ ಹಿಗ್ಗಾ ಮುಗ್ಗ ಥಳಿಸಿದ್ದರು. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಅಲ್ಲದೇ ಹೇಮಾವತಿ, ದೇವಸ್ಥಾನದ ಒಳಗೆ ನನಗೆ ಬಿಡಲು ನಿರಾಕರಿಸಿ ಹಲ್ಲೆ ಮಾಡಿದ್ದು, ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದರು ಎಂದು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ಬೆಳಕಿಗೆ ಬಂದು ಠಾಣೆ ಮೆಟ್ಟಿಲೇರುತ್ತಿದ್ದಂತೆ ಧರ್ಮದರ್ಶಿ ಮುನಿಕೃಷ್ಣ, ಮಹಿಳೆ ತನ್ನ ಮೇಲೆ ದೇವರು ಬರುತ್ತದೆ. ವೆಂಕಟೇಶ್ವರ ನನ್ನ ಪತಿ ಗರ್ಭಗುಡಿಯಲ್ಲಿ ನಾನು ವೆಂಕಟೇಶ್ವರನ ಪಕ್ಕ ಕುಳಿತುಕೊಳ್ಳಬೇಕು ಎಂದು ದೇವಸ್ಥಾನದಲ್ಲಿ ಪಟ್ಟು ಹಿಡಿದಿದ್ದರು. ಮಹಿಳೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಅರ್ಚಕರ ಮೇಲೆಯೇ ಉಗಿದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಎಷ್ಟೇ ಮನವಿ ಮಾಡಿಕೊಂಡರೂ ಮಹಿಳೆ ಕೇಳದಿದ್ದಾಗ ಆಡಳಿತ ಮಂಡಳಿಯವರು ಸೇರಿ ಥಳಿಸಿದ್ದೇವೆ, ಜೊತೆಗೆ ಘಟನೆ ನಡೆದ ಕೆಲ ದಿನಗಳ ನಂತರ ದೇವಾಲಯಕ್ಕೆ ಬಂದು ಕ್ಷಮೆ ಕೇಳಿದ್ದರು ಎಂದಿದ್ದಾರೆ.

Home add -Advt

ಪ್ರಕರಣ ದಾಖಲಿಸಿಕೊಂಡಿರುವ ಅಮೃತಹಳ್ಳಿ ಠಾಣೆ ಪೊಲಿಸರು ಮುನಿಕೃಷ್ಣರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

*ಕೂಡಲಸಂಗಮ, ಗೋಕರ್ಣದಲ್ಲಿ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ*

https://pragati.taskdun.com/siddeshwara-shreechiabhasmavisarjanekudala-sangamagokarna/

Related Articles

Back to top button